UNION MINISTER NEGLEGENCY ANSWER: ರಸಗೊಬ್ಬರ ಕೇಳಿದ್ದಕ್ಕೆ ಕೇಂದ್ರದ ಸಚಿವ ಖೂಬಾರಿಂದ ಉಡಾಫೆ ಉತ್ತರ: ಶಾಸಕರು ಅಧಿಕಾರಿಗಳನ್ನ ಕೇಳಲು ತಾಕೀತು

ಬೀದರ್ : ಸಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲ ಎಂದು ರೈತರೊಬ್ಬರು ಕೇಂದ್ರದ ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಸಂಪರ್ಕಿಸಿದರೆ ನಿಂದಿಸಿದ ಘಟನೆ ನಡೆದಿದೆ.
ಬಾಯಿಗೆ ಬಂದಂತೆ ನಿಂದನೆ ಮಾಡಿದ ವಾಯ್ಸ್ ರೆಕಾರ್ಡ್ ಇದೀಗ ವೈರಲ್ ಆಗಿದ್ದು, ಸಚಿವರ ಮಾತಿಗೆ ಸ್ಥಳೀಯರು ಕೆಂಡಾಮಂಡಲರಾಗಿದ್ದಾರೆ. ಸಚಿವರಾಗಿ ಮೊಂಡುತನ ಪ್ರದರ್ಶಿಸಿದ ಸಚಿವ ಭಗವಂತ ಖೂಬಾ ಅವರು ಸಮಸ್ಯೆ ಪರಿಹಾರಕ್ಕೆ ಮುಂದಾಗದೇ ಇದ್ದುದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಊರಲ್ಲಿ ಗೊಬ್ಬರು ಸಿಗುತ್ತಿಲ್ಲ ಸರ್ ಅಂತ ಪ್ರಶ್ನೆ ಕೇಳಿದಕ್ಕೆ, ನಾನೇನು ಮಾಡಲಿ ಎಂದ ಕೇಂದ್ರ ಸಚಿವ, ಸಾವಿರಾರು ಜನ ನೌಕರರು ಇದ್ದಾರೆ, ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ ಕೇಳು, ನನ್ನ ಕೆಲಸ ರಾಜ್ಯಕ್ಕೆ ಕಳಿಸೋದಾಗಿದೆ, ಕಳುಸಿದ್ದೇನೆ ಅಷ್ಟೇ ಎಂದಿದ್ದಾರೆ.

ಸ್ಥಳೀಯ ಶಾಸಕರ ವಿರುದ್ಧ ಏಕವಚನ ನಿಂದಿಸಿದ ಸಚಿವರು ನೋಡಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವನ್ನ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ,..? ಎಂದು ಉಢಾಫೆ ಉತ್ತರ ನೀಡಿದ್ದಾರೆ. ಮುಂದಿನ ಬಾರಿ ಹೇಗೆ ಆರಿಸಿ ಬರುತ್ತೀರಿ ನೋಡಿ ಎಂದ ರೈತರಿಗೆ, ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ ಎಂದು ಸವಾಲು ಹಾಕಿದರು.

ಅಲ್ಲಿನ ಶಾಸಕರು ಇದ್ದಾರೆ, ಅಧಿಕಾರಿಗಳು ಇದ್ದಾರೆ ಅವರಿಗೆ ಹೋಗಿ ಕೇಳು, ಏನ್ ಮಾಡಿಕೊಳ್ಳುತ್ತೀಯಾ ಮಾಡಿಕೊ ಹೋಗು ಎಂದು ಕ್ಷೇತ್ರದ ಜನರಿಗೆ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ.

#BHAGHAWANTHKHUBHA, #FERTILIZER, #UNIONMINISTER, #FARMER

More News