RAJBHAVAN CHELO: ಕಾಂಗ್ರೆಸ್ ನಿಂದ ರಾಜಭವನ ಚಲೋ: ಬಿಗಿ ಪೊಲೀಸ್ ಬಂದೋಬಸ್ತ್ : ಕೆಪಿಸಿಸಿ ಕಚೇರಿಯಲ್ಲಿ ಸೇರಿದ ಕಾರ್ಯಕರ್ತರು

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ತನಿಖೆಗೆ ಆಗಮಿಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ನಿರಂತರವಾಗಿ ನೋಟೀಸ್ ನೀಡಿತ್ತು.
ನಂತರದ ದಿನಗಳಲ್ಲಿ ಸಮನ್ಸ್ ಜಾರಿಗೊಳಿಸಿದ್ದನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಂದು ರಾಜಭವನ ಚಲೋ ನಡೆಸುತ್ತಿದ್ದಾರೆ.
ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ದಂಡು ಸೇರಿದ್ದು, ರಾಜಭವನದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಾಜಭವನಕ್ಕೆ ಸಂಪರ್ಕಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸಿ ತಮ್ಮ ಕೆಲಸಕ್ಕೆ ತೆರಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಭಾರತ್ ಜೋಡೋ ಕಾರ್ಯಕ್ರಮ ಘೋಷಿಸಿದ್ದಾರೆ, ಇದು ಬಿಜೆಪಿ ನಾಯಕರ ನಿದ್ರೆ ಕೆಡಿಸಿದೆ, ಹಾಗಾಗಿ ಸುಳ್ಳು ಕೇಸುಗಳನ್ನ ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದರು.
ನ್ಯಾಷನಲ್ ಹೆರಾಲ್ಡ್ ಕೇಸ್ ಅವರ ಸ್ವಂತ ಆಸ್ತಿಯಲ್ಲ, ಅದು ಕಾಂಗ್ರೆಸ್ ಕಾರ್ಯಕರ್ತರ ದೇಣಿಗೆ ಹಣದ ಆಸ್ತಿ, ಸ್ವಂತ ಉಪಯೋಗಕ್ಕೆ ಅವರು ಬಳಸಿಕೊಂಡಿಲ್ಲ, ಇಂದಿರಾಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ರು, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ರು, ಸೋನಿಯಾ, ರಾಹುಲ್ ಅಧಿಕಾರ ತ್ಯಾಗ ಮಾಡಿದ್ರು, ಇಂದು ಅಂತವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ಹೋರಾಟದ ಸಮಯ, ಎಲ್ಲಾ ರಾಜ್ಯಗಳಲ್ಲೂ ರಾಜಭವನ ಮುತ್ತಿಗೆ ಇದೆ, ನಮ್ಮ ಪಕ್ಷದ ನಾಯಕರು ರಾಜಭವನ ಮುತ್ತಿಗೆ ಹಾಕುತ್ತಾರೆ, ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗೆ ಈ ಕಾರ್ಯಕ್ರಮವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸೋನಿಯಾ, ರಾಹುಲ್ ಗೆ ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ, ಬಿಜೆಪಿ ಸರ್ಕಾರ ಸುಳ್ಳು ಮೊಕದ್ದಮೆ ಹಾಕಿ, ಇಬ್ಬರು ನಾಯಕರಿಗೆ ಮಾನಸಿಕ ಕಿರುಕುಳ ನೀಡುತ್ತಿದೆ, ನಾವು ಸೋನಿಯಾ, ರಾಹುಲ್ ಬೆನ್ನಿಗೆ ನಿಂತಿದ್ದೇವೆ, ತನಿಖೆಗೆ ನಮ್ಮ ಆಕ್ಷೇಪಣೆಯಿಲ್ಲ, ದುರುದ್ದೇಶದಿಂದ ಸುಳ್ಳು ಕೇಸ್ ಹಾಕಿದ್ದಾರೆ ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.

ಉದಯಪುರದಲ್ಲಿ ಒಂದು ತೀರ್ಮಾನ ಮಾಡಿದ್ದೆವು, ಭಾರತ್ ಜೋಡೋ ಯಾತ್ರೆ ಘೋಷಣೆಯಾಗಿದೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಕಾರ್ಯಕ್ರಮ ನಡೆಯಲಿದೆ, ಈ ಯಾತ್ರೆಯಿಂದ ರಾಹುಲ್ ವರ್ಚಸ್ಸು ಹೆಚ್ಚುತ್ತೆ ಎಂಬ ಕಾರಣಕ್ಕಾಗಿ ಈ ರೀತಿ ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ, ದ್ವೇಷದ ರಾಜಕಾರಣ ಬಿಜೆಪಿ ಮಾಡುತ್ತಿದೆ, ಸುಳ್ಳು ಕೇಸ್ ಹಾಕಿ ವಿಚಾರಣೆ ಮಾಡುತ್ತಿದ್ದಾರೆ, ಮೂರು ದಿನದಿಂದ ವಿಚಾರಣೆ ನಡೆದಿದೆ, ೩೦ ಗಂಟೆಗಳ ಕಾಲ ವಿಚಾರಣೆ ನಡೆದಿದೆ, ಮತ್ತೊಮ್ಮೆ ರಾಹುಲ್ ಗೆ ಸಮನ್ಸ್ ಕೊಟ್ಟಿದ್ದಾರೆ, ಬಿಜೆಪಿ ಐಟಿ, ಇಡಿ, ಸಿಬಿಐ ಬಳಸಿಕೊಂಡಿದೆ, ಎಐಸಿಸಿ ಕಚೇರಿಯನ್ನೂ ಸೀಜ್ ಮಾಡಿದೆ, ಅಲ್ಲಿ ಯಾವ ಪದಾಧಿಕಾರಿ ಹೋಗೋಕೆ ಬಿಡುತ್ತಿಲ್ಲ, ಸಂಸದರನ್ನ ಹೋಗಲು ಬಿಡುತ್ತಿಲ್ಲ, ಅಲ್ಲಿ ಹೋದರೆ ಅರೆಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

#rajbhavanchelo, #congressw, #rahulgandhiedcase, #edcase, #nationalheraldcase, #siddaramaiah, #dkshivakumar, #saleemahamad, #bkhariprasad,

More News