ಪಾಲಿಟೆಕ್ನಿಕ್ ಪ್ರವೇಶ ಸೆ.20ರವರೆಗೆ ಕಾಲಾವಕಾಶ ವಿಸ್ತರಣೆ

ಬೆಂಗಳೂರು : 2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಮೊದಲ ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ತಿಂಗಳ 20ರವರೆಗೆ ಪ್ರವೇಶಾವಕಾಶ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿ ದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು,ರಾಜ್ಯದ 62 ಸರಕಾರಿ,34 ಅನುದಾನಿತ ಪಾಲಿಟೆಕ್ನಿಕ್ʼಗಳಲ್ಲಿ ಪ್ರವೇಶಾವಕಾಶವನ್ನು ಸೆ.20ರ ಸಂಜೆ ಕಚೇರಿ ಅವಧಿವರೆಗೂ ವಿಸ್ತರಿಸಲಾಗಿದೆ.ವಿದ್ಯಾರ್ಥಿಗಳು ಈ ಅವಕಾಶ ಪಡೆದುಕೊಂಡು ದಾಖಲಾಗಬೇಕು ಎಂದು ಸಚಿವರು ತಿಳಿಸಿದ್ದಾರೆ.

ಪ್ರವೇಶಾವಧಿಯನ್ನಿ ವಿಸ್ತರಣೆ ಮಾಡುವಂತೆ ಎಲ್ಲ ಪಾಲಿಟೆಕ್ನಿಕ್ʼಗಳ ಪ್ರಾಂಶುಪಾಲರು ಕೋರಿಕೆ ಸಲ್ಲಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

More News