ಬೆಂಗಳೂರು : ಕೇಂದ್ರ ಸಚಿವರ ಆಪ್ತ ಎಂದು ಹೇಳಿಕೊಂಡು ತಮಿಳುನಾಡಿನ ಚೆನ್ನೈ ಹಾಗೂ ಊಟಿಯಲ್ಲಿ ಸಾರ್ವಜನಿಕರಿಗೆ ವಂಚಿಸಿ ಹಣ ಪಡೆಯುತ್ತಿದ್ದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ದಾಖಲಿಸಿರುವ ಪೊಲೀಸರು ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿನಲ್ಲಿ ನೂರಾರು ಜನರಿಗೆ ವಂಚಿಸಲಾಗಿದೆ. ಸುಮಾರು ಮೂರು ತಿಂಗಳಿಂದ ಆರೋಪಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.
ತಾನು ಸಚಿವೆಯ ಆಪ್ತಸಹಾಯಕ ಎಂದು ಹೇಳಿ ಅಲ್ಲಿನ ಕೃಷಿಕರಿಗೆ ,ಬ್ಯುಸಿನೆಸ್ ಮ್ಯಾನ್ ಮುಂತಾದವರಿಗೆ ವಂಚಿಸಿದ್ದಾನೆ, ಆ ಕೆಲಸ, ಈ ಕೆಲಸ ಮಾಡಿಸಿಕೊಡುವುದಾಗಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾನೆ. ಸಂಸದೆಗೆ ಕರೆ ಮಾಡಿ ಸ್ಥಳೀಯರು ವಿಚಾರ ತಿಳಿಸಿದಾಗ ಪ್ರಕರಣ ಬಯಲಾಗಿದ್ದು, ಆತ ಪ್ರಕಾಶ್ ಎಂದು ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.



ಆದ್ದರಿಂದ ಸಚಿವೆ ಶೋಭಾ ಕರದ್ಲಾಂಜೆ ಆಪ್ತ ವರುಣ್ ಆದಿತ್ಯ, ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಸಂಜಯ್ ನಗರ ಪೊಲೀಸರು ಕೈಗೊಂಡಿದ್ದಾರೆ. #shobhakarnadlaje, #unionminister, #cheating, #chennai, #sanjayanagar, #complaintlodge




