ಬೆಂಗಳೂರು : ಎರಡು ದಿನಗಳ ಭೇಟಿ ಮುಗಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಗೆ ವಾಪಾಸ್ಸಾಗುತ್ತಿದ್ದಂತೆಯೇ ಇತ್ತ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದರು.
ತಮ್ಮ ಕುಟುಂಬ ಸಮೇತರಾಗಿ ಲಂಡನ್ ಗೆ ತೆರಳಿದ ಯಡಿಯೂರಪ್ಪ, ಐದು ದಿನಗಳ ಕಾಲ ಅಲ್ಲಿದ್ದು, ನಂತರ ವಾಪಾಸ್ಸಾಗಲಿದ್ದಾರೆ. ಯಡಿಯೂರಪ್ಪ ಜತೆ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೂ ಲಂಡನ್ ಪ್ರವಾಸ ಕೈಗೊಂಡಿದ್ದಾರೆ.

#bsyeddiyurappa, #byveejendra, #londontour, #fivedayslondontour, #bsy, #bsyrelaxmood




