SANJAY RAUT ALLIGATION: ಮಹಾರಾಷ್ಟ್ರ ಸರ್ಕಾರ ಉಳಿಸಿದರೆ ನಿಮ್ಮನ್ನು ಮನೆಗೆ ಹೋಗಲು ಬಿಡಲ್ಲ ಎಂದ ಕೇಂದ್ರ ಸಚಿವ: ಸಂಜಯ್ ರಾವುತ್ ಆರೋಪ

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ. ಈ ಸಂದರ್ಭದಸ್ಸಿ ಶಿವಸೇನಾ ನಾಯಕ ಸಂಜಯ್ ರಾವುತ್ ನೀಡಿರುವ ಹೇಳಿಕೆ ಮಹಾರಾಷ್ಟ್ರ ಸರ್ಕಾರ ಕೆಡವಲು ಬಿಜೆಪಿ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಒಂದು ವೇಳೆ ಎಂವಿಎ-ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉಳಿಸಲು ಪ್ರಯತ್ನಿಸಿದರೆ ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರನ್ನು ಮನೆಗೆ ಹೋಗಲು ಬಿಡುವುದಿಲ್ಲ ಎಂದು ಕೇಂದ್ರ ಸಚಿವರೊಬ್ಬರು ಬೆದರಿಕೆಯೊಡ್ಡಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾವುತ್, ಶರದ್ ಪವಾರ್ ಅವರಂತಹ ಹಿರಿಯ ನಾಯಕರ ವಿರುದ್ಧ ಈ ರೀತಿ ಹೇಳಿಕೆ ನೀಡಿರಿವುದು ಸರಿಯಲ್ಲ ಎಂದು ಹೇಳಿರುವ ಅವರು ತಮ್ಮ ಟ್ವೀಟ್ ಅನ್ನು ಪ್ರಧಾನಿ ಕಾರ್ಯಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.

ಸರ್ಕಾರ ಉಳಿಯುತ್ತದೆ ಅಥವಾ ಉರುಳುತ್ತದೆ ಆದರೆ ಶರದ್ ಪವಾರ್ ಬಗ್ಗೆ ಇಂತಹ ಹೇಳಿಕೆ ಸರಿಯಲ್ಲ ಎಂದು ರಾವುತ್ ತಿಳಿಸಿದ್ದಾರೆ. ಶಿವಸೇನಾ ಶಾಸಕರ ಬಂಡಾಯದಿಂದ ಮಹಾರಾಷ್ಟ್ರ ಮೈತ್ರಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಆರೋಪ, ಪ್ತ್ಯಾರೋಪ ಜೋರಾಗಿಯೇ ನಡೆಯುತ್ತಿರುವ ಮಧ್ಯೆಯೇ, ರಾವುತ್ ಟ್ಲೀಟ್ ಮಾಡಿದ್ದಾರೆ. ಆದರೆ ಅವರು ಆ ಕೇಂದ್ರ ಸಚಿವರು ಯಾರು ಎಂದು ಉಲ್ಲೇಶಿಸಿಲ್ಲ.

ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರ ಬಂಡಾಯದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಎನ್ ಸಿಬಿ ನಾಯಕ ಶರದ್ ಪವಾರ್ ಕೂಡ ನಿನ್ನೆ ಆರೋಪಿಸಿದ್ದರು.

#sanjayraut, #shivasena, #yekanathsindhe, #sharadpawar, #bjp, #maharastragovernment, #governmentincrisis

More News