ಹೀರೋಗಳು ಪಾತ್ರಕ್ಕೆ ತಕ್ಕಂತೆ ತೂಕ ಹೆಚ್ಚಿಸಿಕೊಳ್ಳುವುದು, ಇಳಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಟಾಲಿವುಡ್‌ನ ಖ್ಯಾತ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಸಿನಿಮಾಕ್ಕಾಗಿ ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ನಟ ಅಲ್ಲು ಅರ್ಜುನ್‌ರವರು ಸದಾ ಫಿಟ್ನೆಸ್‌ಗೆ ಪ್ರಾಮುಖ್ಯತೆ ನೀಡುವ ಹೀರೋ. ಇತ್ತೀಚಿಗೆ ಅಲ್ಲು ಅರ್ಜುನ್ ಅವರು, ಹೈದರಾಬಾದ್‌ನಲ್ಲಿ ಸ್ಟುಡಿಯೋವೊಂದರಿಂದ ಅವರು ಹೊರ ಬರುವಾಗ, ಕ್ಲಿಕ್ ಮಾಡಿದ ಫೋಟೋಗಳು ಇದೀಗ ಸಾಕಷ್ಟು ವೈರಲ್ ಆಗಿವೆ.
ಇದರಲ್ಲಿ ಅಲ್ಲು ಅರ್ಜುನ್ ಸಾಕಷ್ಟು ತೂಕ ಹೆಚ್ಚಿಸಿಕೊಂಡಂತೆ ಕಂಡು ಬಂದಿದ್ದಾರೆ. ಇದನ್ನು ಕಂಡು ಕೆಲವರು ವಡಾಪಾವ್ ಲುಕ್ ಎಂದು ಗೇಲಿ ಮಾಡಿದ್ದಾರೆ. ಇನ್ನೂ ಕೆಲವರು ಇದು ಪುಷ್ಪ ೨ ಚಿತ್ರದ ಗೆಟಪ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಇವರ ಹೊಸ ಲುಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿರುವುದಂತೂ ನಿಜ. ಅಲ್ಲು ಅರ್ಜುನ್ ಅವರ ನಟನೆಯ ಪುಷ್ಪ ಸಿನಿಮಾ ಹಿಟ್ ಆಯಿತು. ಈ ಚಿತ್ರ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಈ ಚಿತ್ರದ ಪಾರ್ಟ್ 2 ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನೂ ಈ ಚಿತ್ರದ ಕಥೆಯಲ್ಲಿ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾದ ಬಗ್ಗೆ ನಿತ್ಯ ಒಂದೊಂದು ವದಂತಿ ಹರಡುತ್ತಿರುವಾಗಲೇ ಅಲ್ಲು ಅರ್ಜುನ್ ಅವರು ತೂಕ ಏರಿಸಿಕೊಂಡಂತೆ ಕಂಡಿರುವುದು ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ.

ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಆಗಿ ಪುಷ್ಪ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಎರಡನೇ ಪಾರ್ಟ್ ನಲ್ಲಿ ಸಿನಿಮಾ ಯಾವ ರೀತಿಯಲ್ಲಿ ಸಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇನ್ನೂ ಬಹುಭಾಷೆಗಳಲ್ಲಿ ಮೂಡಿ ಬಂದಿದ್ದ ಚಿತ್ರ ಇದಾಗಿದ್ದು, ಇದರ ಒಂದೊಂದು ಡೈಲಾಗ್ ಕೂಡ ಫುಲ್ ಫೇಮಸ್ ಆಗಿತ್ತು.
ಪುಷ್ಟು ಅಂದ್ರೆ ಫ್ಲವರ್ ಅಂದುಕೊಂಡ್ರಾ, ಫೈರ್ ಅನ್ನೋ ಡೈಲಾಗ್ ಅಂತೂ ಈಗ್ಲೂ ಅಭಿಮಾನಿಗಳ ಬಾಯಲ್ಲಿ ಬರುತ್ತಿರುತ್ತೆ. ಇನ್ನೂ ಪಾರ್ಟ್ 2 ಚಿತ್ರದ ಕಥೆ ವಿದೇಶದಲ್ಲಿ ಸಾಗಲಿದೆ, ರಶ್ಮಿಕಾ ಪಾತ್ರ ಆರಂಭದಲ್ಲೇ ಸಾಯಲಿದೆ ಹೀಗೆ ಹತ್ತು ಹಲವು ವದಂತಿಗಳು ಸಿನಿಮಾ ಬಗ್ಗೆ ಹರಿದಾಡುತ್ತಿದೆ.

ಜುಲೈ ತಿಂಗಳಿಂದ ಪುಷ್ಪ 2 ಶೂಟಿಂಗ್ ಆರಂಭ ಆಗಲಿದೆ ಎನ್ನುವ ಮಾತು ಕೂಡ ಕೇಳಿಬಂದಿದ್ದು, ಈಗ ಅಲ್ಲು ಅರ್ಜುನ್ ಅವರು ಈ ರೀತಿ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು ನೋಡಿದರೆ ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭವಾಗಿರಬಹುದು ಎನ್ನುವ ಮಾತುಗಳು ಕೇಳಿಬಂದಿದೆ.
ಅಷ್ಟೇ ಅಲ್ಲದೆ ತೂಕ ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಇಷ್ಟು ಗ್ಯಾಪ್ ನೀಡಲಾಯಿತೇ..? ಎನ್ನುವ ಪ್ರಶ್ನೆಗಳು ಸಹ ಅಭಿಮಾನಿಗಳಲ್ಲಿ ಮೂಡಿದೆ. ಅದೇನೆ ಆಗಿರಲಿ, ಪುಷ್ಟ 2 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿರುವುದಂತು ನಿಜ.
#alluarjun, #telaguactor, #stylishstarallu, #bodyshaming, #increasedweight, #puspha, #getapchanged




