AMITABH BACHCHAN: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ನಿಗೆ ಸಾಥ್ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್

ಕಳೆದ ವಾರ ತಾನೇ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಬಹಳ ಖುಷಿ ತಂದಿತ್ತು. ಇನ್ನೂ ಕಿಚ್ಚ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೇಲರ್ ಅನ್ನು ಬಿಗ್ ಬಾಸ್ ಅಮಿತಾಬ್ ಬಚ್ಚನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕ ವರ್ಷಗಳ ಹಿಂದೆಯೇ ಅವರು ಪರಭಾಷೆಯಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅವರು ನಟಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಏಕಕಾಲಕ್ಕೆ ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

ಕನ್ನಡ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ತೆಲುಗಿನಲ್ಲೂ ಕೂಡ ಜುಲೈ ೨೮ ರಂದು ರಿಲೀಸ್ ಆಗಲು ಸಜ್ಜಾಗಿದೆ. ಇನ್ನೂ ಈ ಸಿನಿಮಾಗೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೇಲರ್ ಹಂಚಿಕೊಳ್ಳುವ ಮೂಲಕ ಬಿಗ್ ಬಾಸ್ ಬೆಂಬಲ ನೀಡಿದ್ದಾರೆ.

ಈ ಹಿಂದೆ `ರಣ್’ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ಕಿಚ್ಚ ಸುದೀಪ್ ಅವರು ಜೊತೆಯಾಗಿ ನಟಿಸಿದ್ದು, ಆ ದಿನಗಳಿಂದಲೂ ಅವರ ನಡುವೆ ಬಾಂಧವ್ಯ ಇತ್ತು. ಈಗ ಕಿಚ್ಚನ ಸಿನಿಮಾ ಬಗ್ಗೆ ಅವರು ಟ್ವೀಟ್ ಮಾಡಿರುವುದರಿಂದ ಹಿಂದಿ ಪ್ರೇಕ್ಷಕರ ವಲಯದಲ್ಲಿ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಸದ್ಯ ಬಹಳ ಅದ್ದೂರಿಯಾಗಿ ವಿಕ್ರಾಂತ್ ರೋಣ ಬಿಡುಗಡೆಗೆ ಪ್ಲ್ಯಾನ್ ಮಾಡಲಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಅಷ್ಟೇ ಅಲ್ಲದೆ, ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ನಟಿಸಿದ್ದು, ಈಗಾಗಲೇ ರಾರಾ ರಕ್ಕಮ್ಮ ಹಾಡಿನಿಂದ ಫುಲ್ ಫೇಮಸ್ ಆಗಿದ್ದು, ಒಂದು ದೃಶ್ಯದಲ್ಲೂ ಅವರು ಅಭಿನಯಿಸಿದ್ದಾರೆ ಎಂಬುದು ವಿಶೇಷವಾಗಿದೆ. ಈ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾ ರೀಲ್ಸ್ ಮೂಲಕ ಧೂಳೆಬ್ಬಿಸಿದ್ದು, ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಬಾಲಿವುಡ್ ಮಂದಿಯ ಗಮನ ಕೂಡ ಸೆಳೆದಿದೆ.

ನಿರ್ಮಾಪಕ ಜಾಕ್ ಮಂಜು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಅವರಿಗೆ ಅಲಂಕಾರ್ ಪಾಂಡಿಯನ್ ಸಾಥ್ ನೀಡಿದ್ದಾರೆ. ಹಾಗೇ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ನಿರೂಪ್ ಭಂಡಾರಿ, ನೀತಾ ಅಶೋಕ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿರುವದಂತೂ ನಿಜವಾಗಿದೆ.

#amitabhbachchan, #bigb, #vikranthrona, #kichasudeep, #jaqualinefernadize, #kackmanju, #producer, #tweeter, #rann, #panindiafilm, #fivelanguage

More News