MAHARASHTRA POLITICS: ಶಿವಸೇನೆಯ ಏಕನಾಥ ಶಿಂಧೆ ನೂತನ ಮುಖ್ಯಮಂತ್ರಿ! ಬಿಜೆಪಿಯ ಅಚ್ಚರಿಯ ನಡೆ

ಮುಂಬೈ: ಕಳೆದ ಹತ್ತು ದಿನಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಮಹಾರಾಷ್ಟ್ರದ ರಾಜಕಾರಣ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇದರಲ್ಲಿ ಬಿಜೆಪಿ ಅಚ್ಚರಿಯ ನಡೆಯನ್ನು ಮುಂದುವರೆಸಿದ್ದು, ಶಿವಸೇನೆಯ ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ ಶಿಂಧೆ ಇದೀಗ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಘೋಷಿಸಿದ್ದಾರೆ.
ಏಕನಾಥ್ ಶಿಂಧೆ ಅವರು ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಎರಡು ಬಾರಿ ಸಿಎಂ ಆಗಿದ್ದ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸರ್ಕಾರದ ಭಾಗವಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಇಂದು ಸಂಜೆ ಏಳೂವರೆ ಗಂಟೆಗೆ ಏಕಾನಾಥ ಶಿಂಧೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಏಕನಾಥ ಶಿಂಧೆ ಬಣದಲ್ಲಿರುವ 39 ಶಾಸಕರ ಪೈಕಿ 13 ಜನರಿಗೆ ಸಚಿವ ಸ್ಥಾನ ದೊರಕಲಿದೆ ಎಂದು ತಿಳಿದುಬಂದಿದ್ದು, ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಸರ್ಕಾರ ರಚನೆಗೆ ಶಿಂಧೆ, ರಾಜ್ಯಪಾಲರನ್ನು ಭೇಟಿ ಹಕ್ಕು ಮಂಡಿಸಿದ್ದಾರೆ.

ಫಡ್ನವೀಸ್ ಜತೆ ಕಾಣಿಸಿಕೊಂಡ ಸಾಹುಕಾರ

ಇದರ ನಡುವೆ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಿಎಂ ಫಡ್ನವೀಸ್ ಅವರ ಜತೆ ಕಾಣಿಸಿಕೊಂಡಿದ್ದಾರೆ. ಅವರು ಕೂಡ ಫಢ್ನವೀಸ್ ಜತೆ ಸರ್ಕಾರ ರಚನೆಗೆ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ.

#maharastra new cm , #deveendra fedniviz, #yekanath sindhe, #ramesh jarkiholi, #governor, #today oath taking ceremony

More News