ಬೆಂಗಳೂರು: ಪೊಲೀಸ್ ಇಲಾಖೆ ಅಂದ್ರೆ ಅದು ಶಿಸ್ತಿನ ಇಲಾಖೆ. ತನ್ನ ಮೇಲಿನ ಅಧಿಕಾರಿ ಹೇಳಿದ್ದನ್ನು ಚಾಚು ತಪ್ಪದೇ ನಿರ್ವಹಿಸಲೇಬೇಕು. ತನ್ನ ಮಾತನ್ನು ಕೇಳಲಿಲ್ಲ ಎಂದರೇ ಪೊಲೀಸ್ ಇಲಾಖೆಯಲ್ಲಿ ಶಿಸ್ತಿನ ಕ್ರಮವನ್ನು ಜರುಗಿಸಲಾಗುತ್ತದೆ. ಅದೇ ರೀತಿಯಲ್ಲಿ ತನ್ನ ಮೇಲಾಧಿಕಾರಿ ವಿರುದ್ದವೇ ಚಾಲಕನೊಬ್ಬ ಬರೆದಿರುವ ದೂರು ಇದೀಗ ಸಖತ್ ವೈರಲ್ ಆಗಿದೆ.
ಉಪ ಪೊಲೀಸ್ ಆಯುಕ್ತರಾದ ಅಶೋಕ್ ಆರ್ ಜುಂಜರವಾಡ ಅವರು ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ರಜೆಯನ್ನೇ ನೀಡದೇ ಸತಾಯಿಸಿ ಕಿರಿಕಿರಿ ನೀಡುತ್ತಿದ್ದಾರೆ. ತನಗೊಂದು ವಾಹನ ತನ್ನ ಮನೆಗೊಂದು ವಾಹನ ಉಪಯೋಗಿಸುತ್ತಿರುವ ಆರೋಪವೂ ಅವರ ವಿರುದ್ಧ ಕೇಳಿ ಬಂದಿದೆ.
ಇದರ ಜತೆಯಲ್ಲಿ ತನ್ನ ಚೀಪ್ ಚಾಲಕನಿಗೆ ಇನ್ನಿಲ್ಲದಂತೆ ಕಾಡುತ್ತಿರುವ ವಿಧಾನ ಸೌಧ ಡಿಸಿಪಿಯ ವರ್ತನೆಗೆ ಬೇಸತ್ತ ಚಾಲಕನಿಂದ ಡಿಸಿಪಿ ಅಶೋಕ್ ಆರ್ ಜುಂಜರವಾಡ ವಿರುದ್ದ ದೂರನ್ನು ನೀಡಿದ್ದಾರೆ. ಅದು ಡಿಸಿಪಿ ವಿರುದ್ದ ಬೇರ್ಯಾರಿಗೋ ಕೊಟ್ಟಿರುವ ದೂರಲ್ಲ, ವಿಧಾನ ಸೌಧ ಡಿಸಿಪಿ ಅಶೋಕ್ ಆರ್ ಜುಂಜರವಾಡ ವಿರುದ್ದ ಅವರಿಗೆ ಅವರು ದೂರನ್ನು ನೀಡಲಾಗಿದೆ.
ವಿಧಾನಸೌಧ ಡಿಸಿಪಿ ಮೇಲೆ ಚಾಲಕನಿಂದ ದೂರು
ರಜೆ ನೀಡದೇ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು ಅವರ ವಾಹನ ಚಾಲಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೇ ದೂರು ನೀಡಿದ್ದಾರೆ. ರಜೆ ನೀಡದ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಪ್ರತಿನಿತ್ಯ 12-13ಗಂಟೆ ಕೆಲಸ ಮಾಡಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ಕರ್ತವ್ಯದ ಸಮಯದಲ್ಲಿ ಏನಾದ್ರು ಅನಾಹುತವಾದರೇ ಡಿಸಿಪಿ ಜವಾಬ್ದಾರಿ ಎಂದು ನೊಂದ ಚಾಲಕ ತನ್ನ ಅರ್ಜಿಯಲ್ಲಿ ಬರೆದಿದ್ದಾರೆ.
ಡಿಸಿಪಿ ವಿರುದ್ದ ಡಿಸಿಪಿಗೆ ದೂರು ಕೊಟ್ಟ ಚಾಲಕ
ವಿಧಾನಸೌಧದ ಉಪಪೊಲೀಸ್ ಆಯುಕ್ತ ಅಶೋಕ್ ಆರ್ ಜುಂಜರವಾಡರ ಅಧೀನದಲ್ಲಿ ಕೆಲಸ ಮಾಡುವ ಅಥವಾ ಮಾಡುತ್ತಿರುವ ಸಿಬ್ಬಂದಿಯನ್ನು ಪ್ರಶ್ನಿಸಿದರೇ ಸಾಕು ಸಾಕಷ್ಟು ಸಮಸ್ಯೆಗಳ ಅನಾವರಣವಾಗುತ್ತದೆ.

ಇದರಿಂದಾಗಿ ವಿಧಾನಸೌಧ ಭದ್ರತಾ ಸಿಬ್ಬಂದಿ ನಮ್ಮ ಗೋಳು ಕೇಳೋರಿಲ್ಲ ಸಾರ್ ಎನ್ನುತ್ತಿದ್ದಾರೆ, ಕೇವಲ ಚಾಲಕನಿಗಷ್ಟೇ ಕಾಟವಲ್ಲ, ಇತರ ಸಿಬ್ಬಂದಿಗೂ ತೊಂದರೆ ನೀಡುವ ಬಗ್ಗೆಯೂ ಆರೋಪ ಕೇಳಿಬಂದಿದೆ.

ಮಹಿಳಾ ಸಿಬ್ಬಂದಿಗಳು ಆರೋಗ್ಯ ಸಮಸ್ಯೆ ಹೇಳಿಕೊಂಡರು ರಜೆಯನ್ನು ನೀಡುವುದಿ ಎಂಬ ಆರೋಪ ಕೇಳಿಬಂದಿದೆ.
ಡಿಸಿಪಿ ವಿರುದ್ದವೇ ಚಾಲಕ ಬರೆದ ಅರ್ಜಿ ವೈರಲ್
ಪೊಲೀಸ್ ಇಲಾಖೆಯ ಶಿಸ್ತನ್ನು ಮೀರಬಾರದೆಂಬ ಕಾರಣಕ್ಕೆ ಚಾಲಕ ತನ್ನ ಇಲಾಖೆಯಲ್ಲೇ ಡಿಸಿಪಿ ಅಶೋಕ್ ಆರ್ ಜುಂಜರವಾಡ ವಿರುದ್ದ ಅವರ ಬಳಿಯೇ ದೂರನ್ನು ನೀಡಿದ್ದಾರೆ. ತನಗೆ ಮಾನಸಿಕ ಹಿಂಸೆ ನೀಡಿದ್ದು ಮಾತ್ರವಲ್ಲದೇ ಸರ್ಕಾರಿ ವಾಹನ ದುರುಪಯೋಗದ ಬಗ್ಗೆಯೂ ಸವಿಸ್ತಾರವಾಗಿ ದೂರಿನಲ್ಲಿ ಬರೆದಿದ್ದಾನೆ. ಇದೀಗ ಈ ಅರ್ಜಿ ವೈರಲ್ ಆಗಿದೆ. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಚಾಲಕನದ್ದೋ ಡಿಸಿಪಿಯದ್ದೋ ಎಂಬುದು ಹಿರಿಯ ಅಧಿಕಾರಿಗಳು ನಿರ್ಧರಿಸಬೇಕಾಗಿದೆ.
#dcp, #complaint, #vidhanasoudha, #timing, #overduty, #viral, #driveer




