REBEL MLA’s HOTEL BILL: ಮಹಾರಾಷ್ಟ್ರ ಸಿಎಂ ಶಿಂಧೆ ಹಾಗೂ ರೆಬೆಲ್ ಶಾಸಕರು ಗುವಾಹಟಿ ತಂಗಿದ್ದ ಹೊಟೇಲ್ ನ ಬಿಲ್ ಎಷ್ಟು ಗೊತ್ತೆ?

ಗುವಾಹಟಿ: ಮಹಾರಾಷ್ಟ್ರ ಸರ್ಕಾರವನ್ನು ಬೀಳಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಏಕನಾಥ್ ಶಿಂಧೆ ಹಾಗೂ ಅವರೊಂದಿಗಿದ್ದ ರೆಬೆಲ್ ಶಾಸಕರು ಹುವಾಹಟಿಯಲ್ಲಿ ತಂಗಿದ್ದ ಹೊಟೇಲ್ ನಿಂದ ಹೊರಬಂದು ಸಂಪೂರ್ಣ ಬಿಲ್ ಪಾವತಿಸಿದ್ದಾರೆ.
ಏಕನಾಥ್ ಶಿಂಧೆ ಮತ್ತು ಅವರೊಂದಿಗೆ 39 ಶಾಸಕರು ತಂಗಿದ್ದ ರ್ಯಾಡಿಸನ್ ಬ್ಲೂ ಹೊಟೇಲ್ ಮೂಲಗಳ ಪ್ರಕಾರ, ಹನ್ನೊಂದು ದಿನಕ್ಕೆ ಸುಮಾರು 68 ರಿಂದ 70 ಲಕ್ಷ ರೂಪಾಯಿಯ ಬಿಲ್ ಅನ್ನು ನೀಡಿದೆ, ಹೊಟೇಲ್ ನಲ್ಲಿ ಕೇವಲ ಶಾಸಕರುಗಳಿಗೆ ಮಾತ್ರವಲ್ಲ ಅವರ ಸಹವರ್ತಿಗಳಿಗೂ ಕೊಠಡಿಗಳನ್ನು ಬುಕ್ ಮಾಡಲಾಗಿತ್ತು.
ಏಕನಾಥ್ ಶಿಂಧೆ ಹಾಗೂ ಅವರ ತಂಡ ಈ ಹೊಟೇಲ್ ನಲ್ಲಿ ವಾಸ ಮಾಡುವುದರಿಂದ ಮಹಾರಾಷ್ಟ್ರ ಸರ್ಕಾರವನ್ನು ಕೆಡವಲಾಯಿತು. ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಾಕಷ್ಟು ಬಾರಿ ಈ ರೆಬಲ್ ಶಾಸಕರಿಗೆ ಮನವಿ ಮಾಡಿದ್ದರೂ ಕೂಡ ಅವರು ಈ ಹೊಟೇಲ್ ಬಿಟ್ಟು ಹೊರಬಂದಿರಲಿಲ್ಲ.

ಏಕನಾಥ್ ಶಿಂಧ್ ಮತ್ತು ಅವರ ತಂಡ ಇಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಯಾವುದೇ ಅತಿಥಿಗಳಿಗೆ ಇಲ್ಲಿ ಅವಕಾಶವಿರಲಿಲ್ಲ. ಈ ಹೊಟೇಲ್ ನಲ್ಲಿ ಸುಪೀರಿಯರ್ ಕೊಠಡಿಗಳಿಗೆ 7,500 ರೂಪಾಯಿ, ಡಿಲೆಕ್ಸ್ ಕೊಠಡಿಗಳಿಗೆ 8,500 ರೂಪಾಯಿ ಪಾವತಿ ಮಾಡಬೇಕಾಗಿದೆ.

#radisan blue hotel, #ekanath sindhe, #maharastra, #gawhati, #hotel, #70lakhs

More News