VOTE BANK POLITICS: ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ: ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ :ಮೇಧಾ ಪಾಟ್ಕರ್

ಕೋಲ್ಕತ್ತಾ : ಬಿಜೆಪಿಯು ಬುಡುಕಟ್ಟು ನಾಯಕಿಯಾಗಿರುವ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದರ ಹಿಂದೆ ಬೃಹತ್ ಪ್ರಮಾಣದ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬಿಜೆಪಿ ಹಾಗೂ ಅವರ ಅಂಗ ಪಕ್ಷಗಳ ವಿರುದ್ಧ ಆರೋಪಿಸಿದ್ದಾರೆ.
ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವು ಪ್ರಮುಖ ವೋಟ್ ಬ್ಯಾಂಕ್, ಆದ್ದರಿಂದ ಮುರ್ಮು ಅವರಂತಹ ಬುಡಕಟ್ಟು ಮಹಿಳೆಯನ್ನೇ ಬಿಜೆಪಿ ಆಯ್ಕೆ ಬಯಸುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಒದಗಿಸಲು ಸಾಧ್ಯವಾಗದ ಮುರ್ಮು ಅವರು ಆಡಳಿತರೂಢ ಪಕ್ಷದ ರಬ್ಬರ್ ಸ್ಟ್ಯಾಂಪ್ ಆಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದನ್ನು ಪ್ರಶ್ನಿಸಿದ ಅವರು, ಇದಕ್ಕಾಗಿ 30 ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು. ಅದೇ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಮೇಲೆ ಹಿಂಸಾಚಾರ ನಡೆದಿತ್ತು ಎಂದು ಆರೋಪಿಸಿದರು.

#medha patkar, #social activists, #presidential candidate, #drupadi murma, #nda, #bjp, #Prime minister, #narendra modi, #tribel lady

More News