RASHMIKA MANDANNA: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವಿನ ಗುಸು ಗುಸು ಮತ್ತೆ ಸದ್ದು : ಶೀಘ್ರದಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಾಧ್ಯತೆ

ನಟಿ ರಶ್ಮಿಕಾ ಮಂದಣ್ಣ ಹತ್ತು ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಬಹುಬೇಡಿಕೆಯ ನಟಿಯಾಗಿದ್ದಾರೆ. ಹಾಗೆಯೇ ವಿಜಯ್ ದೇವರಕೊಂಡ ಕೂಡ ಬ್ಯುಸಿ ನಟರಾಗಿದ್ದಾರೆ. ಇವರಿಬ್ಬರ ಬಾಂಧವ್ಯ ಎಂತಹದ್ದು ಎಂದು ಅನೇಕ ಅಭಿಮಾನಿಗಳಿಗೆ ತಿಳಿದದ್ದೇ.
‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಮೇಲಂತೂ ಅವರಿಬ್ಬರ ಕಣ್ಣಾ ಮುಚ್ಚಾಲೆ ಆಟ ಇನ್ನು ಜಾಸ್ತಿಯಾಗಿದ್ದು, ರಿಯಲ್ ಲೈಫ್ ಗೆ ತುಂಬಾ ಹತ್ತಿರವಾದರು. ಮತ್ತೆ ಇವರಿಬ್ಬರನ್ನೂ ಒಟ್ಟಾಗಿ ಚಿತ್ರದಲ್ಲಿ ನಟಿಸಬೇಕೆಂಬುದು ನೂರಾರು ಅಭಿಮಾನಿಗಳ ಅಭಿಲಾಷೆ.
ಇದಕ್ಕಾಗಿ ಇವರಿಬ್ಬರನ್ನು ‘ಜನ ಗಣ ಮನ’ ಚಿತ್ರದಲ್ಲಿ ಒಂದಾಗಿಸಲು ನಿರ್ದೇಶಕರು ಪ್ರಯತ್ನ ಪಟ್ಟಿದ್ದಾರೆ. ಈ ಚಿತ್ರದ ಒಂದು ಹಾಡಿನಲ್ಲಿ ಇವರಿಬ್ಬರು ನಟಿಸಲಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. 2023 ರಲ್ಲಿ ತೆರೆಕಾಣಲು ಸಿದ್ದವಾಗುತ್ತಿರುವ ‘ಜನ ಗಣ ಮನ’ ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಲಿದ್ದಾರೆ. ದೇವರಕೊಂಡ ಜತೆ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ದೇವರಕೊಂಡ ನಟಿಸಿರುವ ‘ಲೈಗರ್’ ಚಿತ್ರ ಈಗಾಗಲೇ ಹಲವು ಭಾಷೆಗಳಲ್ಲಿ ತೆರೆ ಕಂಡಿದೆ. ಹಾಗೆಯೇ ಅವರು ಪಾನ್ ಇಂಡಿಯಾ ಮಟ್ಟದಲ್ಲಿ ಮಿಂಚಬೇಕು ಎನ್ನುವ ಉದ್ದೇಶವಿಟ್ಟು ‘ಜನ ಗಣ ಮನ’ ಚಿತ್ರ ಸಿದ್ದವಾಗುತ್ತಿದೆ.

ಹಾಗೆಯೇ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್ ನಲ್ಲಿ ನಟಿಸಿರುವ ‘ಗುಡ್ ಬೈ’ ಮತ್ತು ‘ಮಿಷನ್ ಮಜ್ನು’ ಚಿತ್ರಗಳು ರಿಲೀಸ್ ಗೆ ಸಿದ್ದವಾಗಿವೆ. ದಳಪತಿ ವಿಜಯ್ ಜತೆ ರಶ್ಮಿಕಾ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

#rashmika mandanna, #vijay deverakonda, #bollywood, #good bye, #mission majnu, #laiger, #together

More News