Letter written in blood: ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಬೇಡ ಜಂಗಮರ ಬೇಡಿಕೆಗಾಗಿ ರಕ್ತದಿಂದ ಪತ್ರ

ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಬೇಡ ಜಂಗಮರು ಮೀಸಲಾತಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಬೇರೆ ಸ್ವರೂಪ ಪಡೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿಗಳೇ ಬೇಡ ಜಂಗಮರ ತಾಳ್ಮೆ ಪರೀಕ್ಷಿಸಬೇಡಿ ಎಂದು ಪ್ರತಿಭಟನೆ ನಡೆಸುತ್ತಿರುವ ಬೇಡ ಜಂಗಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ಬೇಡ ಜಂಗಮ ಒಕ್ಕೂಟ, ಕಲ್ಯಾಣ ಕರ್ನಾಟಕ ಬೇಡ ಜಂಗಮ ಹೋರಾಟ ಸಮಿತಿ ಹುಮನಾಬಾದ್ ಇವರು ರಕ್ತದಿಂದ ಬರೆದ ಮನವಿ ಪತ್ರವನ್ನು ಹುಮ್ನಾಬಾದ್ ತಹಸೀಲ್ದಾರ್ ಅವರಿಗೆ ನೀಡಿದರು.

ಇದರಿಂದ ತಹಸೀಲ್ದಾರ ಕಛೇರಿಯ ಹತ್ತಿರ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ ಬೇರೆ ಸ್ವರೂಪ ಪಡೆದುಕೊಂಡಿದೆ. ಹಾಗೆಯೇ ತಮಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿದರು. ರಾಜ್ಯದ ಮುಖ್ಯ ಮಂತ್ರಿಗಳಿಗೆ ರಕ್ತದಿಂದ ಬರೆದ ಮನವಿ ಪತ್ರ ರವಾನೆ ಮಾಡಿದರು.

ಈ ಮನವಿ ಪತ್ರಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತದೆಯೋ ಎನ್ನುವುದನ್ನು ಕೆಲವು ದಿನಗಳ ಕಾಲ ಕಾದು ಮುಂಬರುವ ದಿನಗಳಲ್ಲಿ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮುಖಂಡರು ಈ ಸಂದರ್ಭದಲ್ಲಿ ತೀರ್ಮಾನ ಕೈಗೊಂಡರು.

More News