ವೀರಶೈವ, ಲಿಂಗಾಯುತ ಸಮಾಜಕ್ಕೆ ಒಳ್ಳೆದಾಗಬೇಕು : ಅಲ್ಪಸಂಖ್ಯಾತ ಸ್ಥಾನಮಾನ ದೊರಕಬೇಕು : ಎಂ ಬಿ ಪಾಟೀಲ್

ಬೆಂಗಳೂರು : ನಮಗೆ ಪ್ರತ್ಯೇಕ ಧರ್ಮ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು, ಆಗ ನಮ್ಮಲ್ಲೂ ಕೆಲವು ಲೋಪದೋಷಗಳಾಗಿದ್ದವು, ಆಗ ರಾಜಕಾರಣದ ಅಪಪ್ರಚಾರ ನಡೆಸಿದ್ದರು, ಹಾಗಾಗಿ ವೀರಶೈವ, ಲಿಂಗಾಯತ ಪ್ರತ್ಯೇಕ ಎಂದಾಯ್ತು, ಈ ರೀತಿ ಎಲ್ಲೂ ಹೇಳಿಲ್ಲ, ನಮಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದ್ದರೆ ಅನುಕೂಲ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಎಂ ಬಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಿಕ್ಕಿದ್ದರೆ ೨-ಎ ಮೀಸಲಾತಿ ಕೇಳುತ್ತಿರಲಿಲ್ಲ, ಅಲ್ಪಸಂಖ್ಯಾತ ಸ್ಥಾನಮಾನ ಸಿಗದಿದ್ದಕ್ಕೆ ಹೋರಾಟ ನಡೆಸಲಾಗಿತ್ತು ಎಂದು ತಿಳಿಸಿದರು.

೨-ಎ ಮೀಸಲಾತಿಗೆ ಹೋರಾಟ ಮಾಡಬೇಕಾಗಿದೆ, ಕೂಡಲಸಂಗಮ, ಹರಿಹರ ಪೀಠದಿಂದ ಮಾಡಬೇಕಾಗಿದೆ, ಇವತ್ತು ನಮ್ಮ ಸಮುದಾಯದಲ್ಲಿ ಬಡವರಿದ್ದಾರೆ, ಹಾಗಾಗಿಯೇ ಧರ್ಮಕ್ಕೆ ನಾವು ಧ್ವನಿ ‌ಎತ್ತಬೇಕಿದೆ, ಚುನಾವಣೆಯ ನಂತರವೇ ಈ ಧ್ವನಿ ಎತ್ತುತ್ತೇವೆ, ಚುನಾವಣೆಗೆ ಮುನ್ನ ಅಂದರೆ ಮತ್ತೆ ರಾಜಕೀಯ ಆಗಲಿದೆ, ಹಾಗಾಗಿ ನಮ್ಮ ಸಮುದಾಯದ ಎಲ್ಲಾ ಪೀಠಾಧಿಪತಿಗಳು, ಮುಖಂಡರು ಸೇರಿ ಚರ್ಚಿಸಿ, ಎಲ್ಲರಿಗೂ ಅನುಕೂಲವಾಗುವ ರೀತಿ ನಿರ್ಧಾರ ಮಾಡ್ತೇವೆ ಎಂದು ತಿಳಿಸಿದರು.

ನಾನು ಕಾಂಗ್ರೆಸ್ ಪಕ್ಷದವನಾಗಿರಬಹುದು, ಆದರೆ ಇದು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ನಮ್ಮ ಮಕ್ಕಳಿಗೆ ಶಿಕ್ಷಣ, ಔದ್ಯೋಗಿಕವಾಗಿ ಅನುಕೂಲವಾಗಬೇಕು, ಇದರಲ್ಲಿ ಯಾವುದೇ ಭಿನ್ನಮತ, ಅಪಸ್ವರವಿಲ್ಲ, ಇದು  ಕೂಗು, ಹೋರಾಟ ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾವು ೯೯ ಉಪ ಪಂಗಡ ಸೇರಿ ‌ಧರ್ಮದ ಮಾನ್ಯತೆ ಕೇಳಿದ್ದೆವು, ಕೆಲವು ಉಪಪಂಗಡ ಅಸಹಾಯಕ ಸ್ಥಿತಿಯಲ್ಲಿವೆ, ವೀರಶೈವ, ಲಿಂಗಾಯತ ಎಂಬುದಿಲ್ಲ, ನಾವೆಲ್ಲರು ಒಗ್ಗಟ್ಟಿನಿಂದ ಹೋಗುತ್ತೇವೆ ಎಂದಿದ್ದೆವು, ನಮ್ಮ ಸಮಾಜಕ್ಕೆ ಒಳ್ಳೆಯದಾಗಬೇಕು ಎಂಬ ಉದ್ದೇಶ ಪ್ರತ್ಯೇಕ ಹೋರಾಟ ಅಂತ ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಯಾವುದೇ ಸಿಎಂ ಹುದ್ದೆಗೆ ಟವೆಲ್ ಹಾಕಿಲ್ಲ, ನಮ್ಮ ಪಕ್ಷದಲ್ಲಿ ಅಂತಹ ವ್ಯವಸ್ಥೆಯಿಲ್ಲ, ಪಕ್ಷದಲ್ಲಿ ‌ಹೈಕಮಾಂಡ್, ವರಿಷ್ಠರು ನಿರ್ಧಾರ ತೆಗೆದುಕೊಳ್ತಾರೆ, ನಾನು ಸಿಎಂ ಸ್ಥಾನಕ್ಕೆ ಎಲ್ಲೂ ಬೇಡಿಕೆ ಇಟ್ಟಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಯೂಟರ್ನ್ ಹೊಡೆದಿಲ್ಲ, ಹಿಂದೆಯೂ ನಮ್ಮ ಉದ್ದೇಶ ಸ್ಪಷ್ಟವಾಗಿತ್ತು, ಈಗಲೂ ನಮ್ಮ ಉದ್ದೇಶ ಸ್ಪಷ್ಟವಾಗಿದೆ, ನನ್ನದು ಯಾವುದೇ ಪೊಲಿಟಿಕಲ್ ಅಜೆಂಡಾ ಇಲ್ಲ, ಜನ ಯಾರನ್ನ ಬಯಸುತ್ತಾರೆ ಅವರು ನಾಯಕರಾಗ್ತಾರೆ ಎಂದು ಎಂ ಬಿ ಪಾಟೀಲ್ ತಿಳಿಸಿದರು.

More News