UNPARLIMENTARY WORDS: ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ: ಇದನ್ನು ಬಳಸಿದರೆ ಕಲಾಪದಿಂದ ಹೊರಗೆ

ನವದೆಹಲಿ : ಜುಲೈ 18ರಿಂದ 2022 ನೇ ಸಾಲಿನ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಅಂದೆ ರಾಷ್ಟ್ರಪತಿ ಚುನಾವಣೆಯೂ ನಡೆಯಲಿದೆ. ಇದರ ನಡುವೆ ಲೋಕಸಭೆ ಸಚಿವಾಲಯ ಅಸಂಸದೀಯ ಪದಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಂಸದರು ಈ ಪಟ್ಟಿಯಲ್ಲಿರುವ ಪದಗಳನ್ನು ಕಲಾಪದ ಸಂದರ್ಭದಲ್ಲಿ ಬಳಸಿದರೆ ಅವರನ್ನು ಸದನದಿಂದ ಹೊರಹಾಕುವ ಎಚ್ಚರಿಕೆಯನ್ನೂ ನೀಡಿದೆ.
ಈ ಪದಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಸ್ಪೀಕರ್ ಅವರನ್ನು ಹೊರಕಳುಹಿಸುತ್ತಾರೆ. ಆದರೆ ಸಭಾಪತಿ ಮತ್ತು ಲೋಕ ಸಭೆ ಸ್ವೀಕರ್ ಗೆ ಇದ್ಯಾವುದು ಅನ್ವಯವಾಗುವುದಿಲ್ಲ.
ಬೆಹ್ರಿ ಸರ್ಕಾರ್, ನೌಟಂಕಿ, ನಿಕಮ್ಮ, ದಿಂಡೋರಾ ಪೀಟ್ನಾ, ಜೈ ಚಂದ್, ಖಾಲಿಸ್ತಾನಿ, ಖೂನ್ ಸೇ ಖೇತಿ, ದೋಹ್ರಾ ಚರಿತ್ರ, ಸರ್ವಾಧಿಕಾರ್, ಬಾಲ್ ಬುದ್ದಿ, ಚಮಚಾಗಿರಿ, ಕೋವಿಡ್ ಸ್ಪ್ರೆಡ್ಡರ್, ಸ್ನೂಪ್ ಗೇಟ್, ಬ್ರಷ್ಟ್ ಮುಂತಾದ ಹಲವು ಪದಗಳನ್ನು ಬಳಸುವಂತಿಲ್ಲ.

ಹಾಗೆಯೇ ಇಂಗ್ಲೀಷ್ ಪದಗಳಾದ ಕ್ರೊಕೊಡೈಲ್ ಟಿಯರ್ಸ್, ಶೇಮ್ಡ್, ಅಬ್ಯುಸ್ಡ್, ಬ್ಲಡಿ, ಬಿಟ್ರೇಡ್, ಬ್ಲಡ್ ಶೆಡ್, ಚೀಟೆಡ್, ಕ್ರಿಮಿನಲ್, ಕೋವಾರ್ಡ್ ಪದಗಳ ಬಳಕೆ ಮಾಡುವಂತಿಲ್ಲ. ಜುಲೈ 18ರಿಂದ ಆರಂಭವಾದ ಅಧಿವೇಶನ ಆಗಸ್ಟ್ 12 ಕ್ಕೆ ಕೊನೆಗೊಳ್ಳಲಿದೆ.

More News