HARRASING Cong PRESIDENT SONIA GANDHI: ಸೋನಿಯಾ ಗಾಂಧಿಯವರಿಗೆ ಕಿರುಕುಳ ನೀಡುವ ಉದ್ದೇಶ ಬಿಜೆಪಿ ಸರ್ಕಾರದ್ದು: ಸೋಮವಾರ ರಾಜಭವನ ಚಲೋ: ಡಿ ಕೆ ಶಿವಕುಮಾರ್

ಬೆಂಗಳೂರು : ದೇಶದಲ್ಲಿ ತನಿಖಾ ಸಂಸ್ಥೆಯನ್ನು ಆಡಳಿತರೂಢ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ, ಕಾಂಗ್ರೆಸ್ ಮೇಲೆ ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಂಸತ್ ಅಧಿವೇಶನ ನಡೆಯುತ್ತಿದೆ, 21ರಂದು ಸಂಸತ್ ಅಧಿವೇಶನ ಇದ್ರು ಕೂಡ ಸೋನಿಯಾ ಗಾಂಧಿ ಅವರಿಗೆ ಇಡಿ ತನಿಖೆಗೆ ಕರೆಯಲಾಗಿದೆ. ಕಿರುಕುಳ ನೀಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಟಿಕೀಸಿದರು.
೫೦ ಗಂಟೆ ಕಾಲ ರಾಹುಲ್ ಗಾಂಧಿಯವರನ್ನ ತನಿಖೆ ಮಾಡಿದರೂ, ಯಾವುದೇ ಸಾಕ್ಷಿ ಇ.ಡಿ ಅಧಿಕಾರಿಗಳಿಗೆ ಸಿಕ್ಕಿಲ್ಲ, ಕೇಳಿದ್ದ ಪ್ರಶ್ನೆಯನ್ನೇ ಮತ್ತೆ ಮತ್ತೆ ಕೇಳಿ ಕಿರುಕುಳ ಕೊಟ್ಟಿದ್ದಾರೆ, ಹಾಗಾಗಿ 21 ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಎಲ್ಲ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ, ನಮ್ಮ ಬಂಧನ ಮಾಡಿದರೂ ಚಿಂತೆ ಇಲ್ಲ, ಹೋರಾಟ ಮಾಡಲೇಬೇಕು, ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ, ಫ್ರೀಡಂ ಪಾರ್ಕ್ ನಿಂದ ರಾಜಭವನದವರೆಗೆ ಪ್ರತಿಭಟನೆ ಮಾಡಲಾಗುವುದು ಎಂದರು.
22ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡಲಾಗುವುದು, 30 ಜಿಲ್ಲೆಗೆ ವೀಕ್ಷಕರನ್ನು ನೇಮಿಸಲಾಗಿದೆ, ನಾನು, ಸಿದ್ದರಾಮಯ್ಯ, ಹರಿಪ್ರಸಾದ್, ಕಾರ್ಯಾಧ್ಯಕ್ಷರು ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ನ್ಯಾಷನಲ್ ಹೆರಾಲ್ಡ್ ಕೇಸ್ ಬಗ್ಗೆ ಪುಸ್ತರವನ್ನು ಬಿಡುಗಡೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್, ಶೀಘ್ರವೇ ಮಾಹಿತಿ ಬಿಡುಗಡೆ ಮಾಡಲಾಗುವುದು, ಈಗಾಗಲೇ ಎಐಸಿಸಿಯಿಂದ ಮಾಹಿತಿ ಬಂದಿದೆ, ಅದನ್ನು ಆದಷ್ಟು ಬೇಗ ಬುಕ್ ಮಾಡಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದೆ
ರಾಜ್ಯದಲ್ಲಿ ಒರಿಜಿನಲ್ ಬಿಜೆಪಿ ಸರ್ಕಾರ ಇಲ್ಲ, ಸಮ್ಮಿಶ್ರ ಸರ್ಕಾರ ಇದೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದ ಶಾಸಕರಿಂದ ಸರ್ಕಾರ ಆಗಿದೆ, ಬಿಜೆಪಿಯವರು ೩೦% ರಷ್ಟು ಸರ್ಕಾರದಲ್ಲಿ ಇದ್ದಾರೆ, ಇದು ಆರ್ ಎಸ್ ಎಸ್ ಗೆ ಸರಿ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ ಒಡೆಯುತ್ತೆ ಅಂತ ಬಿಜೆಪಿ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಏನು ಕುಂಬಳಕಾಯಿನಾ, ಮಡಿಕೆನಾ.. ? ಒಡೆದು ಹೋಗುತ್ತೆ ಅನ್ನುವುದಕ್ಕೆ..?, ಕಾಂಗ್ರೆಸ್ ಯಾಕೆ ಛಿದ್ರವಾಗುತ್ತೆ ಎಂದು ಮರುಪ್ರಶ್ನಿಸಿದರು.

ಸೋನಿಯಾ, ರಾಹುಲ್ ಯಾವತ್ತು ತನ್ನ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಅಂತ ಹೇಳಿಲ್ಲ, ಇದೊಂದು ಚಾರಿಟಬಲ್ ಟ್ರಸ್ಟ್, ಯಾವುದೋ ಕಾಲದಲ್ಲಿ ಇದನ್ನ ಖರೀದಿ ಮಾಡಿರೋದು, ಅವತ್ತು ಕಡಿಮೆ ಬೆಲೆ ಇತ್ತು. ಈಗ ಅದು ಜಾಸ್ತಿ ಆಗಿದೆ, ಟ್ರಸ್ಟ್‌ ನಡೆಸೋದು ತಪ್ಪಾ ಎಂದು ಪ್ರಶ್ನಿಸಿದರು.
ಅಲಹಾಬಾದ್ ನಲ್ಲಿ 25 ಸಾವಿರ ಕೋಟಿ ಆಸ್ತಿ ತ್ಯಾಗ ಮಾಡಿದ್ದಾರೆ, ಈ ಕುಟುಂಬ ಎಷ್ಟು ತ್ಯಾಗ ಮಾಡಿದೆ, ದೇಶದ ಸ್ವಾತಂತ್ರ್ಯಕ್ಕೆ ಮತ್ತು ದೇಶದ ಅಭಿವೃದ್ಧಿಗೆ ತ್ಯಾಗ ಮಾಡಿದ್ದಾರೆ, ಒಬ್ಬ ಸಿಖ್, ಆರ್ಥಿಕ ತಜ್ಞರನ್ನು ಪ್ರಧಾನಿ ಮಾಡಿದ್ದಾರೆ, ಇದಕ್ಕಿಂತ ತ್ಯಾಗ ಬೇಕಾ?, ಈಗ ತಿರಂಗಾ ಹಾರಿಸಿ ಅಂತಿದ್ದಾರೆ, ಇಷ್ಟು ದಿನ ಯಾಕೆ RSS ಕಚೇರಿ ಮೇಲೆ ತಿರಂಗಾ ಹಾರಿಸಿಲ್ಲ, ವಾಜಪೇಯಿ ಗಲಾಟೆ ಮಾಡಿದ ಮೇಲೆ ತಿರಂಗಾ ಹಾರಿಸಿದ್ರು ಎಂದು ವಾಗ್ದಾಳಿ ನಡೆಸಿದರು.

More News