ಕರ್ನಾಟಕ ಮೂಲದ ಸಿನಿ ಶೆಟ್ಟಿ ಈ ವರ್ಷ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫ್ಯಾಷನ್ ಜಗತ್ತಿನಲ್ಲಿ ಹೆಸರು ಮಾಡಿದ ನಂತರ ಸಿನಿಮಾ ಜಗತ್ತಿಗೆ ಅನೇಕರು ಎಂಟ್ರಿ ಕೊಡುತ್ತಾರೆ. ಅದೇ ರೀತಿಯಲ್ಲಿ ಸಿನಿಶೆಟ್ಟಿಯೂ ಕೂಡ ತಯಾರಿ ನಡೆಸಿದಂತೆ ಕಾಣುತ್ತಿದೆ.
ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ನಂತರ ಅವರಿಗೆ ಸಿನಿಮಾ ಜಗತ್ತಿನಿಂದ ಸಾಕಷ್ಟು ಆಫರ್ ಗಳು ಬರುತ್ತಿವೆ. ಅದಕ್ಕೂ ಮುನ್ನಾ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ವೊಂದು ಭಾರೀ ವೈರಲ್ ಆಗಿದೆ. ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಬಳಿಕ ಅವರ ಫಾಲೋವರ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ಕೆಲಸವಿಲ್ಲದಿದ್ದಾಗೆ ಅವರು ಬಾಲಿವುಡ್ ನ ಅನೇಕ ಹಾಡುಗಳಿಗೆ ರೀಲ್ಸ್ ಮಾಡಿದ್ದಾರೆ. ಅವರು ಡ್ಯಾನ್ಸ್ ತರಬೇತಿಯನ್ನೂ ಪಡೆದಿದ್ದು, ವಿಡಿಯೋದಲ್ಲಿ ಅವರು ಹಾಕಿರುವ ಹೆಜ್ಞೆ ಅನೇಕರನ್ನು ಹುಬ್ಬೇರಿಸುವಂತೆ ಮಾಡಿದೆ. ನೃತ್ಯ ಪ್ರಧಾನವಾದ ಚಿತ್ರದಿಂದಲೇ ಅವರು ಬಾಲಿವುಡ್ ಗೆ ಎಂಟ್ರಿ ನೀಡಲಿ ಎಂದು ಅನೇಕರು ತಮ್ಮ ಅನಿಸಿಕೆಯನ್ನು ಬರೆದುಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್ ಸಿನಿಮಾ ಹಾಡಿಗೆ ಸಿನಿ ಶೆಟ್ಟಿ ರೀಲ್ಸ್ ಮಾಡಿ ಅಪ್ ಲೋಡ್ ಮಾಡಿದ್ದಾರೆ. ತನ್ನ ಸ್ನೇಹಿತೆಯ ಜತೆಗೂಡಿ ಮಾಡಿದ ಡ್ಯಾನ್ಸ್, ಸ್ಟೆಪ್ಸ್ ಸೂಪರ್ ಡೂಪರ್ ಹಿಟ್ ಆಗಿದೆ.
#sini shetty #miss india 2022 #dance #viral #deepika padukone #shaid kapoor #padmavath #super steps




