ಬೆಳಗಾವಿ: ಸರ್ಕಾರಿ ಅಧಿಕಾರಿ ರಾಜ್ ಕುಮಾರ್ ಠಾಕಳೆ ನನ್ನ ಪತಿ, ಆತನನ್ನ ಎಲ್ಲಿ ಮತ್ತು ಎಂದು ಮದುವೆಯಾಗಿದ್ದೇನೆ ಎನ್ನುವುದನ್ನು ನಾಳೆ ವಿವರವಾಗಿ ಹೇಳುತ್ತೇನೆ ಎಂದು ಹನಿಟ್ರ್ಯಾಪ್ ಆರೋಪಕ್ಕೆ ಗುರಿಯಾಗಿರುವ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತನೇ ತನ್ನ ಪತಿ ಎನ್ನುವುದರ ಮೂಲಕ ರಾಜ್ ಕುಮಾರ್ ಅವರಿಗೆ ನವ್ಯಶ್ರೀ ಶಾಕ್ ಕೊಟ್ಟಿದ್ದಾರೆ.
ನಾನು ಕಳೆದ 15 ದಿನಗಳಿಂದ ಭಾರತ ದೇಶದಲ್ಲಿ ಇರಲಿಲ್ಲ, ಇವತ್ತು ಬಂದಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋ, ವಿಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ, ಇದರ ಸಂಬಂಧ ನಾನು ಬೆಳಗಾವಿ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ದೂರು ಹಾಗೂ ವಿವರ ನೀಡುತ್ತೇನೆ ಎಂದು ನವ್ಯ ಶ್ರೀ ಹೇಳಿದ್ದಾರೆ.
ನನ್ನ ಮೇಲೆ FIR ಆಗಿರುವ ಮಾಹಿತಿ ನನಗೆ ಗೊತ್ತಿಲ್ಲ ಎಂದು ತಿಳಿಸಿದ ಆಕೆ, ಇಲ್ಲಿಯವರೆಗೂ ಯಾವುದೇ ಪೊಲೀಸರು ನನಗೆ ಪೋನ್ ಮಾಡಿಲ್ಲ, ಆ ರೀತಿ ಏನಾದರೂ ಇದ್ದರೆ ನಾನು ಕಂಪ್ಲೇಟ್ ಕಾಪಿ ಪಡೆದು ಮಾತಾಡುತ್ತೇನೆ ಎಂದು ತಿಳಿಸಿದರು.
ಹಾಗಾದರೆ ರಾಜಕುಮಾರ ಟಾಕಳೆ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕುಮಾರ ಟಾಕಳೆ ನನ್ನ ಗಂಡ, ಅವನಿಂದ ನನಗೆ ಏನು ಮೋಸ ಆಗಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಹೇಳಿದರಲ್ಲದೆ, ಹೌದು ನಾನು ಮದುವೆ ಆಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಾನು ಯಾವ ರೀತಿ ಮದುವೆ ಆಗಿರುವೆ ಎಲ್ಲವನ್ನ ನಾಳೆ ಹೇಳುವುದಾಗಿ ತಿಳಿಸಿದ ಅವರು, ಕಮಿಷನ್ ಕಚೇರಿಗೆ ತೆರಳಿದರು.
ಹಿನ್ನೆಲೆ
ಡಿಸೆಂಬರ್ 2020 ರಂದು ತೋಟಗಾರಿಕೆ ಇಲಾಖೆ ಉಪನಿರ್ದೇಶನ ರಾಜಕುಮಾರ್ ಟಾಕಳೆ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪರಿಚಯವಾಗಿದ್ದ ನವ್ಯಶ್ರೀ, ತಾನು ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ.



ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್ ಜಿ ಒ ನಡೆಸುವುದಾಗಿ ಅಂದು ಅವರು ತಿಳಿಸಿ, ನನ್ನ ಬಳಿ ಬಹಳ ಸಲುಗೆ ಬೆಳೆಸಿಕೊಂಡಿದ್ದರು. 2021 ಡಿಸೆಂಬರ್ 24 ರಂದು ರಾಜ್ ಕುಮಾರ್ ಅವರಿಗೆ ಕರೆ ಮಾಡಿ ಬೆದರಿಕೆಯೊಡ್ಡಿ 50 ಲಕ್ಷ ಹಣಕ್ಕಾಗಿ ಬೆದರಿಕೆಯಾಡ್ಡಿದ್ದರು.
ಹಣ ನೀಡಿಲ್ಲದಿದ್ದರೆ ವಿಡಿಯೋ ಮತ್ತು ಫೋಟೋ ವೈರಲ್ ಮಾಡುವುದಾಗಿ ತಿಳಿಸಿದ್ದರು ಎಂದು ರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




