T-20 UNIQUE RECORD: ಟಿ-20 ಕ್ರಿಕೆಟ್ ಪಂದ್ಯದ ಎಸೆದ ಮೊದಲ ಓವರ್ ನಲ್ಲೇ ಹ್ಯಾಟ್ರಿಕ್: ವಿಶಿಷ್ಟ ದಾಖಲೆ ಬರೆದ ನ್ಯೂಜಿಲೆಂಡ್ ಸ್ಪಿನ್ನರ್

ಐರ್ಲೆಂಡ್ : ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ತಂಡಗಳ ನಡುವೆ ಮೂರು ಪಂದ್ಯಗಳ ಟಿ-20 ಕ್ರಿಕೆಟ್ ಸರಣಿ ಪಂದ್ಯ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಈಗಾಗಲೇ ನ್ಯೂಜಿಲೆಂಡ್ 2-0 ಅಂತರದಿಂದ ಮುನ್ನೆಡೆ ಸಾಧಿಸಿದೆ.
ಪಾದಾರ್ಪಣೆ ಮಾಡಿದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ವಿಶಿಷ್ಟ ದಾಖಲೆ ಮಾಡಿದ್ದಾರೆ. ಚುಟುಕು ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಎರಡನೇ ಪಂದ್ಯದಲ್ಲೇ ನ್ಯೂಜಿಲೆಂಡ್ ಆಟಗಾರ ಸ್ವಿನ್ನರ್ ಮೈಕಲ್ ಬ್ರೇಸ್ ವೆಲ್ ಈ ವಿಶೇಷ ಸಾಧನೆ ಮಾಡಿದ್ದಾರೆ.
ಎರಡನೇ ಟಿ -20 ಪಂದ್ಯದಲ್ಲಿ ನ್ಯೂಜಿಲೆಂಡ್ ಟಾಸ್ ಸೋತಿತ್ತು, ಆದರೆ ಮೊದಲು ಬ್ಯಾಂಟಿಂಗ್ ಮಾಡುವ ಅವಕಾಶ ಪಡೆದಿದ್ದ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 174 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ 13 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 86 ರನ್ ಗಳಿಸಸ್ಟೇ ಸಾಧ್ಯವಾಗಿತ್ತು.

14ನೇ ಓವರ್ ಮಾಡಲು ಕ್ರಿಸ್ ಗೆ ಇಳಿದ ಬ್ರೆಸ್ ವೆಲ್ ಜೀವಮಾನದ ಮೊದಲ ಓವರ್ ವಿಶೇಷವಾಗಿ ಹಾಕಿದ್ದರು. ಎಸೆದ ಮೊದಲ ಎಸೆತದಲ್ಲಿ 5 ರನ್ ನೀಡಿದರು. ನಂತರ ಮೂರು ಎಸೆತದಲ್ಲಿ ಕ್ರಮವಾಗಿ ಮೂರು ವಿಕೆಟ್ ಪಡೆದರು. ಹೀಗಾಗಿ ಐರ್ಲೆಂಡ್ 91 ರನ್ ಗೆ ಕುಸಿಯಿತು.

ಇದರೊಂದಿಗೆ ಟಿ-20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಎರಡನೇ ಪಂದ್ಯದಲ್ಲಿ ಎಸೆದ ಮೊದಲ ಓವರ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಸ್ಪಿನ್ನರ್ ಆಗಿ ಮೊದಲ ಪಂದ್ಯದಲ್ಲಿದ್ದರೂ ಬೌಲಿಂಗ್ ಮಾಡಿರಲಿಲ್ಲ.

#micheal Bracewell #newzland #ireland #t-20 #record #first player

More News