COLOURFUL BIRDS IN KARNATAKA: ಕನ್ನಡ ನಾಡಿನ ಬಣ್ಣದ ಬಾನಾಡಿಗಳು: ವಿವಿಧ ಪ್ರಬೇಧದ ಪಕ್ಷಿಗಳ ಪುಸ್ತಕ ಬಿಡುಗಡೆ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು : “ಹಲವು ದಶಕಗಳ ಪತ್ರಿಕಾ ಛಾಯಾಚಿತ್ರಗಾರರಾಗಿ, ವನ್ಯಜೀವಿ ಛಾಯಾಚಿತ್ರಗಳನ್ನು ಸೆರೆ ಹಿಡಿಯುವ ಮೂಲಕ ಪಕ್ಷಿಗಳ‌ ಜೀವನ ಚರಿತ್ರೆಯನ್ನು ಚಿತ್ರೀಕರಿಸಿದ್ದಾರೆ. ಇದೊಂದು ಶ್ಲಾಘನೀಯ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಶ್ವನಾಥ್ ಸುವರ್ಣ ಅವರ ಕನ್ನಡ ನಾಡಿನ ಬಣ್ಣದ ಬಾನಾಡಿಗಳು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಶ್ವನಾಥ್ ಸುವರ್ಣ ಅವರ ಸಹನೆ, ತಾಳ್ಮೆ, ಪ್ರಾಣಿ ಪಕ್ಷಗಳು, ಕನ್ನಡ ನಾಡಿನ ಇತಿಹಾಸದ ಬಗ್ಗೆ ಇರುವ ಅಪಾರ ಕಾಳಜಿಯನ್ನು ಮೆಚ್ಚಬೇಕು ಎಂದರು.
ವಿಶ್ವನಾಥ್ ಸುವರ್ಣ ತೆಗೆದಿರುವ ಚಿತ್ರಗಳು ಸಂಗ್ರಹಕ್ಕೆ ಯೋಗ್ಯವಾಗಿದ್ದು, ಶಾಲಾ ಮಕ್ಕಳಿಗೆ, ಜನರು ರಾಜ್ಯದ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ರಾಜ್ಯದ ಎಲ್ಲಾ ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು ಇಂತಹ ಪುಸ್ತಕಗಳನ್ನು ಖರೀದಿಸಬೇಕೆಂದು ಅವರು ಮನವಿ ಮಾಡಿದರು.

ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕ ೮೫ ಪ್ರಭೇದಗಳ ೨೫೦ ಕ್ಕೂ ಹೆಚ್ಚು ಪಕ್ಷಿಗಳ ಜೀವನ ಕ್ರಮ, ಹಾರಾಟ, ಆಹಾರದ ಹುಡುಕುವ ಕ್ರಮ, ಮರಿಗಳ ಪಾಲನೆ, ಗೂಡು ಕಟ್ಟುವುದು ಎಲ್ಲಾ ಪ್ರಕ್ರಿಯೆಗಳನ್ನು ಒಳಗೊಂಡ ಚಿತ್ರಗಳನ್ನು ಅದ್ಬುತವಾಗಿ ಚಿತ್ರೀಕರಿಸಿದ್ದಾರೆ. 688 ಪುಟಗಳ ಒಳಗೊಂಡು ಪಕ್ಷಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ, ಜೀವನ ಕ್ರಮ, ಪ್ರಭೇದಗಳು ಕುರಿತು ಮಾಹಿತಿ ನೀಡಿದ್ದಾರೆ.

More News