INDIA V/S WEST INDIES: ವಿಶ್ವದಾಖಲೆ ಬರೆದ ಟೀಮ್ ಇಂಡಿಯಾ: ವೆಸ್ಟ್ ಇಂಡೀಸ್ ವಿರುದ್ಧ ಸತತ 12ನೇ ಸರಣಿ ಜಯಿಸಿದ ಭಾರತ

ಟ್ರಿನಿಡಾಡ್ : ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ 2-0 ರನ್ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿನೂತನ ದಾಖಲೆಯೊಂದನ್ನು ಬರೆದಿದ್ದು, ತಂಡವೊಂದರ ವಿರುದ್ಧ ಸತತ 12 ಸರಣಿಗಳನ್ನು ಗೆದ್ದ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ.
ಕ್ವಿನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ವೆಸ್ಟ್ ಇಂಡೀಸ್ ತಂಡ 311 ರನ್ ಗಳ ಬೃಹತ್ ಗುರಿಯನ್ನು ನೀಡಿತ್ತು. ಓಪನರ್ ಶಾಯ್ ಹೋಪ್ ಅವರ ಶತಕರದ ನೆರವಿನಿಂದ ಈ ಬೃಹತ್ ಮೊತ್ತ ದಾಖಲು ಮಾಡಲಾಯಿತು.
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ತಂಡದ ಆಟಗಾರರ ಒ ಗ್ಗಟ್ಟಿನ ಪ್ರದರ್ಶನದಿಂದ ಇನ್ನೂ ಎರಡು ವಿಕೆಟ್ ಬಾಕಿ ಉಳಿದಿರುವಂತೆ ಗೆಲುವು ದಾಖಲಿಸಿತು. ಶ್ರೇಯಸ್ ಅಯ್ಯರ್ 63, ಸಂಜು ಸಾಮ್ಸನ್ 54 ಹಾಗೂ ಅಕ್ಷರ್ ಪಟೇಲ್ ಆಜೇಯ 64 ರನ್ ಗಳ ಸಹಾಯದಿಂದ ಭಾರತ ಗೆಲುವಿನ ನಗು ಬೀರಿತು.

https://twitter.com/BCCI/status/1551335862340042752?s=20&t=iJ2c_5jWpxpV5lyTUCuQ0A

ವೆಸ್ಟ್ ಇಂಡೀಸ್ ವಿರುದ್ಧದ 2007 ರಿಂದ ಇಲ್ಲಿಯವರೆಗಿನ 12 ಏಕದಿನ ಸರಣಿಯಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದು ಮೆಲುಗೈ ಸಾಧಿಸಿದೆ. ಈ ಮೊದಲು ಒಂದು ತಂಡ ಬೇರೆ ಯಾವುದೇ ತಂಡದ ವಿರುದ್ಧ ಸತತ ಗೆಲುವು ಸಾಧಿಸಿರಲಿಲ್ಲ.

ಪಾಕಿಸ್ತಾನ ಮತ್ತು ಜಿಂಬಾಬ್ವೆ 1996 ರಿಂದ 2021 ರ ನಜುವೆ ನಡೆದ 11 ಸರಣಿಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ.

#teamindia #india #westindies #series win #worldrecord #shikhar dhawan #sreyas iyer #akshar patel

More News