ಜೀವನದಲ್ಲಿ ಏನಾಜದರೂ ಸಾಧನೆ ಮಾಡಬೇಕು, ಅತ್ಯುತ್ತಮ ಹೆಸರನ್ನು ಗಳಿಸಬೇಕು ಎಂದು ಚಿತ್ರರಂಗ ಪ್ರವೇಶ ಮಾಡಿದ ಮಲಯಾಳಂ ನಟ ಶರತ್ ಚಂದ್ರನ್ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಸುಮಾರು 37 ವರ್ಷದ ಶರತ್ ಚಂದ್ರನ್ ಅವರು ಸಾವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಅವರು ಶುಕ್ರವಾರ ರಾತ್ರಿ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶರತ್ ಚಂದ್ರನ್ ಅವರು ಇಹಲೋಕ ತ್ಯೆಜಿಸಲು ನಿಜವಾದ ಕಾರಣ ತಿಳಿದುಬಂದಿಲ್ಲ. ಆದರೆ, ಅವರ ಮೃತದೇಹದ ಪಕ್ಕದಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವ ಪತ್ರವೊಂದು ಪೊಲೀಸರಿಗೆ ಲಭ್ಯವಾಗಿದೆ. ಮನೆಗೆ ಆಸರೆಯಾಗಿದ್ದ ಶರತ್ ಚಂದ್ರನ್ ಅವರು ತಾಯಿ ಮತ್ತು ತಮ್ಮನನ್ನು ನೋಡಿಕೊಳ್ಳುತ್ತಿದ್ದರು.
ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಶರತ್ ಚಂದ್ರನ್ ಅವರು, ಕ್ರಮೇಣ ನಟನೆಯನ್ನು ಆರಂಭಿಸಿದರು. ಹಲವು ಚಿತ್ರಗಳಲ್ಲಿ ನಟಿಸುವುದರ ಮೂಲಕ ಅವರು ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಮಾಡಿಕೊಂಡಿದ್ದರು.
ಶರತ್ ಚಂದ್ರನ್ ಅವರ ಅಕಾಲಿಕ ನಿಧನದಿಂದ ಮಲಯಾಳಂ ಚಿತ್ರರಂಗ ಬಡವಾಗಿದ್ದು, ಅಮೂಲ್ಯ ಕಲಾವಿದನೊಬ್ಬನನ್ನು ಕಳೆದುಕೊಂಡಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಶರತ್ ಚಂದ್ರನ್ ಅವರು ಅಂಗಮಾಲಿ ಡೈರೀಸ್, ಒರು ಮೆಕ್ಸಿಕನ್ ಅಪರತ, ಸಿಐಎ, ಕೊಡೆ ಮುಂತಾದ ಹಲವು ಹಿಟ್ ಟಿತ್ರಗಳನ್ನು ನೀಡಿದ್ದರು.




