ACTRESS RADHIKA KUMARASWAMY: ಡ್ಯಾನ್ಸ್ ಅಭ್ಯಾಸದ ವೇಳೆ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ

ಬೆಂಗಳೂರು : ನಟಿ ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವಾಗಲೇ ಕಾಲು ಜಾರಿ ಬಿದ್ದಿದ್ದಾರೆ. ತಾವು ಬಿದ್ದಿರುವ ವಿಡಿಯೋವನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಅನೇಕ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಯಿಸಿದ್ದಾರೆ.
ಅನೇಕರು ರಾಧಿಕಾ ಕುಮಾರಸ್ವಾಮಿ ಅವರಿಗೆ ಜಾಗ್ರತೆಯಿಂದ ಡ್ಯಾನ್ಸ್ ಮಾಡಬೇಕಿತ್ತು ಎಂದು ಅಮೂಲ್ಯವಾದ ಸಲಹೆ ನೀಡಿದ್ದಾರೆ, ಇನ್ನು ಅನೇಕರು ಅತೀಯಾದ ಉತ್ಸಾಹ ಬೇಡ ಎಂದಿದ್ದಾರೆ. ಡ್ಯಾನ್ಸ್ ಮಾಡುವಾಗ ಕಾಲುಗಳು ಜಾರದಂತೆ ನೆಲಹಾಸನ್ನು ಹಾಕಿಕೊಂಡು ಅಭ್ಯಾಸ ನಡೆಸಬೇಕಿತ್ತು ಎಂದಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ನಾನಾ ರೀತಿಯ ವಿಡಿಯೋಗಳನ್ನು ಆಗಾಗ್ಗೆ ಅವರು ಹಂಚಿಕೊಳ್ಳುತ್ತಿರುತ್ತಾರೆ.

ಆದರೆ, ಕಾಲು ಜಾರಿ ಬಿದ್ದ ಬಳಿಕ ಅವರಿಗೆ ಏನಾಗಿದೆ ಎನ್ನುವುದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ.

More News