ಬೆಂಗಳೂರು : ಅಳೆದು ತೂಗಿ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ಪ್ರಾರಂಭಿಸಿದೆ. ಅದನ್ನು ತಮ್ಮ ಪಕ್ಷದವನ್ನೇ ಪ್ರಶ್ನಿಸಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್, ರಾಜ್ಯ ಸರ್ಕಾರ ಮದ್ಯಾಹ್ನದ ಊಟದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆಯನ್ನು ನೀಡಲು ಏಕೆ ನಿರ್ಧರಿಸಿದೆ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಟ್ವೀಟರ್ ನಲ್ಲಿ ಪ್ರಶ್ನಿಸಿದ್ದಾರೆ.
Why has our Karnataka govt decided to give eggs in midday meal? these are not the only source of nutrition. It is also exclusionary to many students who are vegetarians.
— Tejaswini AnanthKumar (@Tej_AnanthKumar) August 1, 2022
Our policies are to be designed such that every student has equal opportunity.
ಪೋಷಕಾಂಶಕ್ಕೆ ಇದು ಏಕೈಕ ಮೂಲವೇನಲ್ಲ, ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳು ಇದರಿಂದ ಹೊರಗುಳಿಯುವಂತಾಗಲಿದೆ ಎಂದಿದ್ದಾರೆ.
My statement…#ChildFriendlyPolicy#NutritionForAll pic.twitter.com/2UNrfdRKqE
— Tejaswini AnanthKumar (@Tej_AnanthKumar) August 2, 2022
ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ನೀಡುವಂತಹ ನಮ್ಮ ನೀತಿಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ತೇಜಸ್ವಿನಿ ಅನಂತ್ ಕುಮಾರ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊಟ್ಟೆಗೆ ನನ್ನ ವಿರೋಧವಿಲ್ಲ, ಅಪೌಷ್ಠಿಕತೆಯನ್ನು ಮೊಟ್ಟೆಯೇ ನಿವಾರಿಸುತ್ತದೆ ಎಂದರೆ ಅದು ಬಹಳ ತಪ್ಪು ಎಂದು ತಿಳಿಸಿದ್ದಾರೆ.




