SUSHMITA MANGO, AMIT SHAH MANGO: ಇನ್ನು ಮುಂದೆ ಮಾರುಕಟ್ಟೆಗೆ ಬರಲಿದೆ ಸುಷ್ಮಿತಾ ಆಮ್ ಮತ್ತು ಅಮಿತ್ ಷಾ ಆಮ್

ಉತ್ತರಪ್ರದೇಶ : ತೋಟಗಾರಿಕಾ ಕ್ಷೇತ್ರದ ವಿಶಿಷ್ಟ ಸಾಧನೆಗಾಗಿ 2008ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಮ್ಯಾಂಗೋಮ್ಯಾನ್ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ಮತ್ತೆ ದೇಶದ ಗಮನ ಸೆಳೆದಿದ್ದಾರೆ. ತಾವು ಬೆಳೆದ ಹೋಸ ತಳಿಯ ಮಾವುಗಳಿಗೆ ಮತ್ತೆ ಖಾತನಾಮರ ಹೆಸರನ್ನು ಇಟ್ಟಿದ್ದಾರೆ.
ರಸಪುರಿ, ಸಿಂಧೂರಾ, ಮಲ್ಲಿಕಾ ಹೀಗೆ ಹತ್ತು ಹಲವಾರು ರೀತಿಯ ಮಾವಿನ ತಳಿಗಳ ಹೆಸರುಗಳನ್ನು ಸಾಕಷ್ಟು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ. ಆದರೆ, ಹಾಜಿ ಕಲೀಮುಲ್ಲಾ ಅವರು ಈ ಹಿಂದೆ ತಾವು ಬೆಳೆದ ಮಾವುಗಳಿಗೆ ಐಶ್ವರ್ಯ ಆಮ್, ಸಚಿನ್ ಆಮ್ ಎಂದು ಹೆಸರು ಇಟ್ಟಿದ್ದರು.
ಆದರೆ ಇದೀಗ ಹೊಸ ತಳಿಯ ಮಾವುಗಳಿಗೆ ಸುಶ್ಮಿತಾ ಆಮ್, ಅಮಿತ್ ಷಾ ಆಮ್ ಎಂದು ಹೆಸರು ಇಟ್ಟಿದ್ದಾರೆ. ಹಾಜಿ ಕಲೀಮುಲ್ಲಾ ಅವರು ಖ್ಯಾತ ನಾಮರ ಹೆಸರನ್ನು ತಾವು ಬೆಳೆದ ಮಾವುಗಳಿಗೆ ಇಡುವುದು ವಾಡಿಕೆ. ಅದರಂತೆಯೇ ಈ ಬಾರಿ ಅವರು ಉತ್ತರ ಪ್ರದೇಶದ ಮಲಿಹಾಬಾದ್ ನಲ್ಲಿರುವ ಅವರ ತೋಟದಲ್ಲಿ ಬೆಳೆದ ಮಾವುಗಳಿಗೆ ಈ ಹೆಸರನ್ನು ಇಟ್ಟಿದ್ದಾರೆ.

ಸೌಂದರ್ಯ, ವ್ಯಕ್ತಿತ್ವ ಮತ್ತು ಸಾಮಾಜಿಕ ಕಳಕಳಿಯಿಂದ ವಿಶ್ವದ ಗಮನ ಸೆಳೆದ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳಿದ್ದಾರೆ.

ಹಾಗೆಯೇ, ಇನ್ನೊಂದು ಮಾನಿಗೆ ಅಮಿತ್ ಷಾ ಅವರ ಹೆಸರಿಟ್ಟಿದ್ದಾರೆ. ಈ ತಳಿ ಗಾತ್ರದಲ್ಲಿ ಮತ್ತು ಪರಿಮಳದಲ್ಲಿ ಸುಧಾರಣೆ ಕಾಣಬೇಕಾಗಿದೆ ಎಂದು ಕಲೀಮುಲ್ಲಾ ತಿಳಿಸಿದ್ದಾರೆ.

82 ವರ್ಷ ವಯಸ್ಸಿನ ಕಲೀಮುಲ್ಲಾ ಅವರು ಇದುವರೆಗೂ 300 ಕ್ಕೂ ಹೆಚ್ಚು ವಿಶಿಷ್ಟ ತಳಿಯ ಮಾವುಗಳನ್ನು ಬೆಳೆದಿದ್ದಾರೆ. ಮುಲಾಯಂ ಆಮ್, ನಮೋ ಆಮ್, ಸಚಿನ್ ಆಮ್, ಕಲಾಂ ಆಮ್, ಅಮಿತಾಬ್ ಆಮ್, ಯೋಗಿ ಆಮ್ ಹೇಗೆ ಹಲವರ ಹೆಸರನ್ನು ಇಟ್ಟಿದ್ದಾರೆ.

More News