ಬೆಂಗಳೂರು : ಬಿಬಿಎಂಪಿ ಎಲೆಕ್ಷನ್ ಎದುರಿಸಲು ಬಿಜೆಪಿ ಸಿದ್ಧವಿದೆ. ಆದ್ರೆ ಕಾಂಗ್ರೆಸ್ ಸಿದ್ಧವಿಲ್ಲ ಹೀಗಾಗಿ ಪ್ರತಿಭಟನೆ ಹಾಗೆಯೇ ತಮಗಿಷ್ಟ ಬಂದಂತೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಯಾವುದೇ ಮಾನದಂಡಯಿಲ್ಲದೇ ತಮಗಿಷ್ಟ ಬಂದ ಹಾಗೆ ಮೀಸಲಾತಿ ಪಟ್ಟಿ ಪ್ರಕಟಿಸಿದ್ದಾರೆಂಬ ಆರೋಪಿಸಿದ್ದ ಕೈ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ಈ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ.
ಮೀಸಲಾತಿ ಪಟ್ಟಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್, ಮಹಿಳಾ ವಿರೋಧಿ ಅಂತಾ ತೋರಿಸಿಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ಮೀಸಲಾತಿ ಪಟ್ಟಿಯನ್ನು ಕಾನೂನು ಪ್ರಕಾರವೇ ಮಾಡಿದ್ದೇವೆ. ಯಾವುದಾದ್ರೂ ತಪ್ಪಿದ್ರೆ ತೋರಿಸಲಿ, ಅಬ್ಜೆಕ್ಷನ್ ಹಾಕಲಿ. 243 ವಾರ್ಡ್‌ಗಳಿಗೆ ಎಷ್ಟು ಮಹಿಳಾ ಮೀಸಲಾತಿ ನೀಡಬೇಕು, SC, ST, OBC ಎಲ್ಲವೂ ಕಾನೂನಿನ ಪ್ರಕಾರ ನೀಡಿದ್ದೇವೆ ಅಂತಾ ಸಚಿವರು ಹೇಳಿದರು.
50% OBC, 50% ಜನರಲ್, 50% ಮಹಿಳೆಯರಿಗೂ ನೀಡಲಾಗಿದೆ. ಕೋರ್ಟ್ ತೀರ್ಪಿನ ಬಳಿಕ ನಮ್ಮ ಸರ್ಕಾರ ಬೇಕಿರೋ ಕೆಲಸ ಮಾಡಿದೆ. ಇವರಿಗೆ ಕಾನೂನಿನ ಅರಿವಿಲ್ಲವೇ ಸಚಿವರಾಗಿದ್ದವರು, ಸರ್ಕಾರ ನಡೆಸಿದವರಲ್ವಾ ಇವ್ರು. ವಿಧಾನಸೌಧದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ ಅಂತಾ ಕಿಡಿಕಾರಿದರು.
ರಾಮಲಿಂಗಾರೆಡ್ಡಿ ಪೊಲಿಟಿಕಲ್ ಸ್ಟಂಟ್ ಮಾಡಿದ್ದಾರೆ- ಸಚಿವ ಅಶ್ವತ್ಥ್ ನಾರಾಯಣ್
ಇನ್ನು ಮಾಜಿ ಸಚಿವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ರಾಮಲಿಂಗಾ ರೆಡ್ಡಿ ಗೆದ್ದಾಗಿನಿಂದ ಮಂತ್ರಿಗಳೇ ಆಗಿದ್ದಾರೆ. ಬೆಂಗಳೂರಲ್ಲಿ ಬೇರು ಬಿಟ್ಟಿದ್ದಾರೆ. ಬರಿ ಪೊಲಿಟಿಕಲ್ ಸ್ಟಂಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರಿಗೆ ಮೀಸಲಾತಿ ಪಟ್ಟಿ ಬಗ್ಗೆ ಅಸಮಾಧಾನ ಇದ್ರೆ ಆಕ್ಷೇಪಣೆ ಸಲ್ಲಿಸಲಿ.ಅದನ್ನು ಬಿಟ್ಟು ವಿಕಾಸಸೌಧದಲ್ಲಿ ಪ್ರತಿಭಟಿಸಿದ್ದು ಸರಿಯಲ್ಲ, ಬಾಯಿಗೆ ಬಂದಂತ ಹೇಳಿಕೆ ಕೊಡುವುದುನ್ನು ಬಿಡಬೇಕು ಎಂದರು.
ಸಿದ್ದರಾಮೋತ್ಸವ ಅಲ್ಲ ಅದು ರಿಟೈರ್ಡ್ ಮೆಂಟ್ ಉತ್ಸವ
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಹುಟ್ಟು ಹಬ್ಬವನ್ನು ದಾವಣಗೆರೆಯಲ್ಲಿ ಉತ್ಸವ ರೀತಿಯಲ್ಲಿ ಆಚರಿಸಲಾಗಿತ್ತು. ಅಂದಾಜು 8ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಸಿದ್ದರಾಮೋತ್ಸವದ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮೋತ್ಸವನಾ ವೆರಿ ಇಂಟ್ರೆಸ್ಟಿಂಗ್ ಸಬ್ಜೆಕ್ಟ್, 75 ವರ್ಷ ಆಗಿದೆ ರಿಟೈರ್ಡ್ ತಗೋಳೋಕೆ ಕಾರ್ಯಕ್ರಮ ಮಾಡಿದ್ದಾರೆ ಅಂತಾ ವ್ಯಂಗ್ಯವಾಡಿದ್ರು. ಹಿಂದೆ ಸಿಎಂ ಆದಾಗ ನಾನು ಮುಂದಿನ ಬಾರಿ ನಿಲ್ಲಲ್ಲ ಅಂತ ಹೇಳಿದ್ರು.ಆದ್ರೆ ಮತ್ತೆ ಚುನಾವಣೆ ನಿಂತರು, ಈಗಲೂ ನಿಲ್ಲೋದಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಬಿಟ್ರೆ ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲವಾ ಬೇರೆಯವರು.? ಮಾರ್ಗದರ್ಶನ ಮಾಡಿಕೊಳ್ಳಲು ಈಗ ಸಿದ್ದರಾಮೋತ್ಸವ ಮಾಡಿಕೊಂಡಿದ್ದಾರೆ, ಇದರಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.




