ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿಗೆ ಆರ್ ಎಸ್ ಎಸ್ ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ, ತ್ರಿವರ್ಣ ಧ್ವಜಕ್ಕೆ ಆರ್ ಎಸ್ ಎಸ್ ಗೌರವ ಕೊಟ್ಟ ಇತಿಹಾಸವೇ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅವರು, ತಿರಂಗಾವನ್ನ ಸಾಮಾಜಿಕ ಜಾಲತಾಣದ ಡಿಪಿಯಾಗಿ ಬದಲಾಯಿಸದೆ, RSS ಭಾಗವಧ್ವಜದ ಮೇಲಿನ ವ್ಯಾಮೋಹ ಪ್ರದರ್ಶಿಸುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
RSS ತ್ರಿವರ್ಣ ಧ್ವಜಕ್ಕೆ ಗೌರವ ನೀಡಿದ ಇತಿಹಾಸವೇ ಇಲ್ಲ.
— Hariprasad.B.K. (@HariprasadBK2) August 8, 2022
ತಿರಂಗಾವನ್ನ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವಾಗಿ ಬದಲಾಯಿಸಲು ಪ್ರಧಾನಿ @narendramodi ಕೊಟ್ಟ ಕರೆಗೆ RSS ಕವಡೆ ಕಾಸಿನ ಕಿಮ್ಮತ್ತೇ ಕೊಟ್ಟಿಲ್ಲ.
ಡಿಪಿಯಲ್ಲಿ ತಿರಂಗಾ ಧ್ವಜ ಹಾಕದೆ, ಭಾಗವಧ್ವಜದ ಮೇಲೆ ಎಂದಿನ ತನ್ನ ವ್ಯಾಮೋಹ ಪ್ರದರ್ಶನ ಮಾಡಿದೆ. pic.twitter.com/9YdRuLIZJy
ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಚಿತ್ರವಾಗಿ ತಿರಂಗಾ ಹಾಕಲು ಪ್ರಧಾನಿ ಮೋದಿ ಅವರು ಕರೆ ನೀಡಿದ್ದರು. ಫ್ರೊಫೈಲ್ ಡಿಪಿ ಬದಲಾಯಿಸದ ಆರ್ ಎಸ್ ಎಸ್ ಮೇಲೆ ಬಿಕೆ ಹರಿಪ್ರಸಾದ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.




