CHAMARAJPET EIDGAH GROUND CONTROVERSY: ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯೇ? ನಾಲಿಗೆ ಹರಿಬಿಟ್ಟ ಶಾಸಕ ಸಿ.ಟಿ ರವಿ

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯೇ? ಎಂದು ಶಾಸಕ ಸಿ.ಟಿ ರವಿ ಪ್ರಶ್ನಿಸುವುದರ ಮೂಲಕ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಜನಪ್ರತಿನಿಧಿಯೊಬ್ಬ ಮತ್ತೋರ್ವ ಜನಪ್ರತಿನಿಧಿಗೆ ಬಳಸಿರುವ ಭಾಷೆ ಅವರ ವ್ಯೆಕ್ತಿತ್ವ ತೋರಿಸುತ್ತದೆ ಎಂದು ಸಾರ್ವಜನಿಕರ ಮಾತನಾಗಿದೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂಬ ಜಮೀರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಗಣೇಶೋತ್ಸವದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಇಡಬೇಕು ಎಂದಾದರೆ ಇಟ್ಟೇ ಇಡುತ್ತೇವೆ. ಬೇಡ ಎನ್ನಲು‌ ಅವರು ಯಾರು? ಇವರು ಯಾವ ಸೀಮೆ ದೊಣ್ಣೆ ನಾಯಕ ಎಂದು ಪ್ರಶ್ನಿಸಿದ್ದಾರೆ.
ನಮ್ಮ ದೇಶದಲ್ಲಿ ಗಣಪತಿ ಇಡಬೇಕೋ, ಬೇಡವೋ‌‌ ಎಂದು ಜಮೀರ್ ಕೇಳಿ ತೀರ್ಮಾನ ಮಾಡಬೇಕಾ? ಜಮೀರ್ ಕೇಳಿ ಗಣೇಶ ಪ್ರತಿಷ್ಠಾನ ಮಾಡಬೇಕಾದ ಅಗತ್ಯ ಇಲ್ಲ. ನಮಗೆ ತಾಕತ್ತು ಇದೆ, ನಾವು ಇಡುತ್ತೇವೆ. ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ, ಬಂದು‌ ತಡಿಯಲಿ ನೋಡೋಣ ಎಂದು ಸವಾಲು ಹಾಕಿದರು.
ಗಣೇಶನನ್ನು ಇಡಲು ಇವರ ಅಪ್ಪಣೆ ಏಕೆ ಬೇಕು? ನಾವು ಅರಬ್ ನಲ್ಲಿ‌ ಗಣೇಶ ಇಡುತ್ತಿದ್ದೇವಾ? ಅರಬ್ ನಲ್ಲಿ ಗಣೇಶ ಕೂರಿಸಬೇಕಾದರೆ ಜಮೀರ್ ಹಾಗೂ ಅವರ ಪೂರ್ವಜರ ಅಪ್ಪಣೆ ಬೇಕಾಗಬಹುದು ಆದರೆ ನಮ್ಮ ದೇಶದಲ್ಲಿ ಗಣೇಶ ಇಡಲು‌ ಜಮೀರ್ ಅಪ್ಪಣೆ ಬೇಕಿಲ್ಲ ಎಂದರು‌.

ಈದ್ಗಾ ಮೈದಾನಕ್ಕೆ ಜಯ ಚಾಮರಾಜ ಒಡೆಯರ್ ಹೆಸರು ಇಡಲಿ. ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ‌ನಿಟ್ಟಿನಲ್ಲಿ ನಮಗೆ ಬೇಕಾಗಿರುವುದು ಬಿಬಿಎಂಪಿ, ಪೊಲೀಸ್ ಇಲಾಖೆ ಅನುಮತಿ ಬೇಕೇ ಹೊರತು ಜಮೀರ್ ಅನುಮತಿ ಅಲ್ಲ ಎಂದರು.

ಇದೇ ಸಂದರ್ಭದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದ ಅವರು, ವಿರೇಂದ್ರ ಪಾಟೀಲ್ ದಾಖಲೆ ಸ್ಥಾನ ಗೆಲ್ಲಿಸುವ ಮೂಲಕ ಸಿಎಂ ಆಗಿದ್ದರು. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದ ಕಾರಣ ನೀಡಿ, ಏರ್ ಪೋರ್ಟ್ ನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ‌ ಚೀಟಿ ನೀಡುವ ಮೂಲಕ ಸಿಎಂ ಬದಲಾವಣೆ ಮಾಡಿದ್ದರು. ಇದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದರು.

ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಚುನಾವಣೆಗೆ ನಿಲ್ಲಬೇಕಾದರೆ ಮತದಾರ ಪಟ್ಟಿಯಲ್ಲಿ‌ ಹೆಸರು ಇದ್ದರೆ ಸಾಕು ಆದರೆ ಗೆಲ್ಲಿಸಲು ಜನರು ಓಟ್ ಹಾಕಬೇಕು. ಆದರೆ ನನ್ನನ್ನು ಜನರು ಗೆಲ್ಲಿಸುತ್ತಾರೆ. ಕ್ಷೇತ್ರದಲ್ಲಿ ಎಲ್ಲ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದರು.

More News