EDUCATION MINISTER HAS TO DROP FROM CABINET: ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ ಇದು: ಬಿಜೆಪಿಗೆ ಪ್ರಶ್ನಿಸಿದ ಕಾಂಗ್ರೆಸ್

ಬೆಂಗಳೂರು : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು, ಇದೀಗ ಬಿ.ಸಿ ನಾಗೇಶ್ ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜವನ್ನು ಕುಗ್ಗಿಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟರ್ ನಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ಧ ಹರಿಹಾಯ್ದ ಕಾಂಗ್ರೆಸ್, ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ ಇದು @BJP4Karnataka? ಎಂದು ಪ್ರಶ್ನಿಸಿದೆ.

ಸಿಎಂಗೆ ತಿರಂಗಾ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಲಿ ಎಂದು ಆಗ್ರಹಿಸಿದೆ.

ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆ ತಿಳಿದಿಲ್ಲ
ಹಾಗೆಯೇ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಸಚಿವ ಭೈರತಿ ಬಸವರಾಜ್ ಅವರು ರಾಷ್ಟ್ರಧ್ವಜವನ್ನು ಉಲ್ಟಾ ಶರ್ಟ್ ಮೇಲೆ ಹಾಕಿರುವುದಕ್ಕೆ ಕಿಡಿಕಾರಿದೆ.

ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ ಎಂದು ಟ್ವೀಟ್ ಮಾಡಿದೆ. ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ, ಸಂವಿಧಾನ ವಿರೋಧಿಗಳಲ್ಲವೇ, ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ @nalinkateel ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ #NakliDeshBhakts ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.

More News