ಬೆಂಗಳೂರು : ಮಂತ್ರಿ ಡೆವಲಪರ್ ನಿಂದ ಗ್ರಾಹಕರಿಗೆ ವಂಚನೆ ಮಾಡಿದ್ದಾರೆ ಎಂಬ ಪ್ರಕರಣ ಸಂಬಂಧ ED ಅಧಿಕಾರಿಗಳು ಮಂತ್ರಿ ಗ್ರೂಪ್ ಗೆ ಸೇರಿದ 300 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಮಂತ್ರಿ ಗ್ರೂಪ್ ನಿಂದ ಹಲವು ಗ್ರಾಹಕರಿಗೆ ಪ್ಲ್ಯಾಟ್ ಖರೀದಿಗೆ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿತ್ತು. ಸಕಾಲದಲ್ಲಿ ಮಂತ್ರಿ ಗ್ರೂಪ್ ಗ್ರಾಹಕರಿಗೆ ಫ್ಲ್ಯಾಟ್ ನೀಡದೇ ಮೋಸ ಮಾಡಿದೆ ಎಂದು ಹಣ ಕಳೆದಕೊಂಡ ನೂರಾರು ಗ್ರಾಹಕರು ಪೊಲೀಸ್ ಠಾಣೆ ಹಾಗೂ EDಗೆ ದೂರು ನೀಡಿದ್ದರು.

ಈ ಪ್ರಕರಮ ಸಂಬಂಧ ಇತ್ತೀಚೆಗೆ ಮಂತ್ರಿ ಗ್ರೂಪ್ ನ MD ರನ್ನ ಸುಶೀಲ್ ಮಂತ್ರಿಯನ್ನು ED ಅಧಿಕಾರಿಗಳು ಬಂಧಿಸಿದ್ದರು.





