ಮಾದಕ ನಟನೆಯಿಂದ ಪಡ್ಡೆ ಹುಡಗರ ನಿದ್ದೆಗೆಡಿಸಿದ ನಟಿ ಅಂದ್ರೆ ಅದು ಬಾಲಿವುಡ್ ಕೃಷ್ಣಸುಂದರಿ ನಟಿ ಬಿಪಾಶಾ ಬಸು. ತನ್ನ ಬೂಲ್ಡ್ ನಟನೆಯಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟಿ. ಇದೀಗ ಈ ಹಾಟ್ ಬ್ಯೂಟಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ತಾವು ತಾಯಿ ಆಗುತ್ತಿರುವ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೊತೆಗೆ ಟ್ಯಾಗ್‌ಲೈನ್ ನೀಡಿದ್ದು, ನಾವೀಗ ಇಬ್ಬರಲ್ಲ, ಮೂವರು ಎಂದು ಪತಿ ಕರಣ್ ಸಿಂಗ್ ಜತೆಗೆ ಹಾಟ್ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ತಾವು ತಾಯಿ ಆಗುತ್ತಿರೋದರ ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ಹಾಟ್ ಬೇಬಿ ಬಂಪ್ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನು ನಟಿ ಬಿಪಾಶಾ ಬಸು ನಟ ಕರಣ್ ಸಿಂಗ್ ಅವರನ್ನು ಪ್ರೀತಿಸಿ 2016ರಲ್ಲಿ ಗುರು ಹಿರಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
#bipasha basu #karan singh #we are not two three #hot hot baby #bumpphotoshoot




