DIVYA SPANDANA REVEALS TRUTH: ತನ್ನ ಮದುವೆಯ ಸತ್ಯ ಬಿಚ್ಚಿಟ್ಟ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ..!

ಸ್ಯಾಂಡಲ್‌ವುಡ್‌ನಲ್ಲಿ  ಕ್ವೀನ್‌ ಅಂದರೆ ಅದು ಮೋಹಕ ತಾರೆ ರಮ್ಯಾ. ಚಿತ್ರರಂಗದಿಂದ ದೂರವಾದ ಬಳಿಕ ರಾಜಕೀಯ ಸೇರಿದ್ದರೂ ಕೂಡ ಇಂದಿಗೂ ಬಹುಬೇಡಿಕೆಯಲ್ಲಿರುವ ನಟಿ. ಜೊತೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸ್ಯಾಂಡಲ್‌ವುಡ್‌ ಸುಂದರಿ. ವಯಸ್ಸು 39 ಆದರೂ ಕೂಡ ಇಂದಿಗೂ ಕೂಡ ಸೌಂದರ್ಯ ಮಾಸದ ರೂಪವತಿ.

ಈ ಮೋಹಕ ತಾರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿದ್ರೆ ಅಭಿಮಾನಿಗಳು ಕೇಳುವ ಮೊದಲ ಪ್ರಶ್ನೆ ಮದುವೆ ಯಾವಾಗ ಅಂತಾ. ಇದಕ್ಕೂ ರಮ್ಯಾ ಸದ್ಯಕ್ಕೆ ನಾನು ಮದುವೆಯಾಗಲ್ಲ ಅಂತಾನೇ ಹೇಳುತ್ತಾ ಬಂದಿದ್ದಾರೆ. ಆದರೆ ಇದೀಗ ಮತ್ತೆ ತಾನು ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗೆ ಬ್ಯೂಟಿ ಕ್ವೀನ್‌ ಉತ್ತರಿಸಿದ್ದಾರೆ.

ಅದೇನಂದರೆ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ರಮ್ಯಾ ಒಂದು ಹಾಡನ್ನು ಹಾಡಿದ್ದಾರೆ .ಅದು Iamnotshane ಅವರ ‘Maybe My Soulmate Died’ ಹಾಡಿಗೆ ಲಿಪ್ ಸಿಂಕ್ ಮಾಡಿರುವ ವಿಡಿಯೋದಲ್ಲಿ  ಯಾಕೆ ಮದುವೆಯಾಗಿಲ್ಲ ಎಂಬುವುದಕ್ಕೆ ಉತ್ತರಿಸಿದ್ದಾರೆ. ಅದೇನಂದರೆ ಇನ್ನೂ ʻನಾನು ಯಾಕೆ ಮದುವೆಯಾಗಿಲ್ಲ ಯಾಕಂದ್ರೆ, ನನ್ನ ಸೋಲ್‌ಮೇಟ್ ಸತ್ತುಹೋಗಿರಬಹುದುʼ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇನ್ನೂ ಈ ವಿಡಿಯೋವನ್ನು ನೋಡಿದ ರಮ್ಯಾ ಅಭಿಮಾನಿಗಳು ಸೋ ಕ್ಯೂಟ್ ಎಂದಿದ್ದಾರೆ. 

ಇನ್ನು ರಮ್ಯಾ 2003ರಲ್ಲಿ  ಪುನೀತ್‌ ರಾಜ್‌ಕುಮಾರ್‌ ಅಭಿನಯದ ಅಭಿ ಚಿತ್ರದ ಮೂಲಕ  ಕನ್ನಡ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ ಅವರು 2016 ರವರೆಗೆ ಹಿಂದುರುಗಿ ನೋಡಲಿಲ್ಲ. ಮುಟ್ಟಿದೆಲ್ಲಾ ಚಿನ್ನ ಎಂಬಂತೆ ನಿರ್ಮಾಪಕರ ಪಾಲಿನ ಅದೃಷ್ಟ ಲಕ್ಷ್ಮಿ ಆದ್ರು. ಹಾಗೇ  ಕನ್ನಡ ಎಲ್ಲಾ ಸ್ಟಾರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ ಹೆಗ್ಗಳಿಕೆಗೂ ಪಾತ್ರರಾದರು.

ಸ್ಟಾರ್‌ ನಟಿಯಾಗಿದ್ದಾಗಲೇ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ರು. ನಂತರ  ಕಾಂಗ್ರೆಸ್‌ನಿಂದ 2013ರಲ್ಲಿ ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ ನಂತರ ಚಿತ್ರರಂಗದಿಂದ ದೂರವಾಗಿ ರಾಜಕೀಯದಲ್ಲಿ ಸಕ್ರೀಯರಾದರು. ನಂತರ ಮತ್ತೆ ಲೋಕಸಭಾ  ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡರು. ಆನಂತರ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಕೂಡ ಕೆಲಸ ನಿರ್ವಹಿಸಿ, ನಂತರ ದಿನಗಳಲ್ಲಿ  ಅಲ್ಲಿಂದಲೂ ಕೂಡ ದೂರವಾದರು.

ಸದ್ಯ  ಎರಡು ವರ್ಷದ ಹಿಂದೆ ರಾಜಕಾರಣದಿಂದಲೂ ಹಿಂದೆ ಸರಿದಿರುವ ರಮ್ಯಾ ಅವರು ಚಿತ್ರರಂಗದಲ್ಲಿ ಸಕ್ರೀಯವಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರ ರಂಗಕ್ಕೆ ಕಮ್‌ಬ್ಯಾಕ್‌ ಮಾಡುತ್ತಾರೆ ಇದಕ್ಕಾಗಿ ಅವರು  ತೂಕ ಇಳಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು.

ಒಟ್ಟಾರೆಯಾಗಿ ಮತ್ತೆ ಬೆಳ್ಳಿಪರದೆಯ ಮೇಲೆ ಪದ್ಮಾವತಿಯನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

#divyaspandana #ramya #actressramya #politicianramya #marraige

More News