ಬಾಗಲಕೋಟೆ: ಬಿಜೆಪಿಗೆ ಸೇರಿದರೆ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ, ಇಲ್ಲದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಇನ್ ಡೈರೆಕ್ಟಾಗಿ ವ್ಯಕ್ತಿಯೊಬ್ಬರು ತಮಗೆ ಹೇಳಿದ್ದರು ಎಂದು ಎಎಪಿ ಉಪಾಧ್ಯಕ್ಷ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ರಾಜ್ಯ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾಸ್ಕರರಾವ್, ಒಂದು ವರ್ಷವಾದರೂ ನನ್ನ ರಾಜೀನಾಮೆ ಅಂಗೀಕಾರ ಮಾಡಿರಲಿಲ್ಲ, ನನ್ನ ಏನಾದರೂ ಸಿಕ್ಕಿಸಬಹುದು ಅಂತ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎಂದು ನೇರವಾಗಿ ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷದವರು 70 ವರ್ಷದಲ್ಲಿ ದೇಶವನ್ನು ಲೂಟಿ ಮಾಡಿ ಹಾಳು ಮಾಡಿದ್ದನ್ನು, ಇವರು (ಬಿಜೆಪಿ) 7 ವರ್ಷದಲ್ಲಿ ಮಾಡಿದ್ದಾರೆ, ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ, ನನ್ನ ಬಳಿಯೂ ಸರ್ಕಾರದ ಒಳಗಿನ ಅನೇಕ ಮಾಹಿತಿಗಳಿವೆ, ಸಮಯ, ಸಂದರ್ಭ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದು ತಿಳಿಸಿದರು.
#bhaskar rao #former bangalore city commissioner #aap #vice president #bagalkote




