ACCIDENT 9 PEOPLE DEATH: ಲಾರಿ – ಕ್ರೂಷರ್ ಭೀಕರ ಅಫಘಾತ: 9 ಮಂದಿ ಸ್ಥಳದಲ್ಲೇ ಸಾವು 12 ಕ್ಕೂ ಹೆಚ್ಚು ಜನರು ಗಂಭೀರ ಗಾಯ

ತುಮಕೂರು : ತುಮಕೂರಿನ ಕಳಂಬೆಳ್ಳದ ಬಾಲೇನಹಳ್ಳಿ ಗೇಟ್ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 9 ಜನರು ಸ್ಥಳಲ್ಲೇ ಮೃತಪಟ್ಟಿದ್ದಾರೆ. 12 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ತುಮಕೂರಿನ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೇನಹಳ್ಳಿ ಗೇಟ್ ಬಳಿ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಮುಂದಿರುವ ವಾಹನವನ್ನು ಹಿಂದಿಕ್ಕಲು ಹೋದಾಗ ಮುಂದಿನಿಂದ ಬಂದ ಲಾರಿಗೆ ಟೆಂಪೋ ಟ್ರ್ಯಾಕ್ಸ್ ( ಕ್ರೂಷರ್) ಡಿಕ್ಕಿಯಾಗಿದ್ದರಿಂದ ಈ ದುರ್ಘಟನೆ ಜರುಗಿದೆ.
ಸ್ಥಳಕ್ಕೆ ಕಳ್ಳಂಬೆಳ್ಳ ಸಬ್ ಇನ್ಸ್ ಪೆಕ್ಟರ್, ಶಿರಾ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ‌ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತರು ಬೆಂಗಳೂರಿನಿಂದ – ರಾಯಚೂರು ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರ್ಯಾಕ್ಸ್ ನಲ್ಲಿ ಇದ್ದವರಾಗಿದ್ದಾರೆ. ಬೆಳಗಿನ ಜಾವ ಸರಿಸುಮಾರು 4 .30 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ.

ಮೃತರು ರಾಯಚೂರಿನ ಸಿಂಧೂರಿನ ಮೂಲದವರಾಗಿದ್ದು, ಮೃತರನ್ನು ಕಷ್ಣಪ್ಪ, ಸುಜಾತ, ವಿನೋದ ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳು ಸ್ಥಳದಲ್ಲೇ‌ ಸಾವಿಗೀಡಾಗಿದ್ದಾರೆ ಇನ್ನೂ ಗಾಯಗೊಂಡ ದುರ್ಗಮ್ಮ, ಬಾಲಾಜಿ, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜ್, ಮೌನಿಕ, ನಾಗಮ್ಮ, ನಾಗಪ್ಪ, ವಸಂತ, ವೈಶಾಲಿ, ಲಿಲಿತ ಎಂದು ಗುರುತಿಸಲಾಗಿದೆ.

ಗಾಯಗೊಂಡವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೂಷರ್ ನಲ್ಲಿದ್ದವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.

#accident #lorry-crusher #9people death #12 people injured #tumkur #klallambella #raichur sindanooru

More News

You cannot copy content of this page