ಬೀದರ್ : ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನಾಯಕರುಗಳ ವಲಸೆ ಆರಂಭವಾಗಿದೆ. ಜೆಡಿಎಸ್ ನಲ್ಲಿ ಪ್ರಥಮ ಬಾರಿಗೆ ಎಂ ಎಲ್ ಎ ಸ್ಥಾನವನ್ನು ಪಡೆದುಕೊಂಡಿದ್ದ ಬೀದರ್ ನ ಬಸವಕಲ್ಯಾಣ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಆ ಪಕ್ಷಕ್ಕೆ ಟಾಟಾ ಬೈಬೈ ಹೇಳಿರುವುದು ಹಳೆಯ ಮಾತು.
ಇದೀಗ ಗಡಿಜಿಲ್ಲೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಜೆಡಿಸ್ ಪಕ್ಷಕ್ಕೆ ಬೈ ಬೈ ಅಂದಿದ್ದ ಮಲ್ಲಿಕಾರ್ಜುನ ಖೂಬಾ ಇದೀಗ ಬಿಜೆಪಿಯಲ್ಲಿದ್ದಾರೆ. ಇಲ್ಲಿ ತಮಗೆ ಟಿಕೇಟು ಸಿಗುವುದು ಅನುಮಾನ ಎಂಬುದನ್ನು ಅರಿತ ಅವರು ಬಿಜೆಪಿಗೂ ಬೈ ಬೈ ಹೇಳಲು ಮುಂದಾಗಿದ್ದಾರಂತೆ.
ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಎದ್ದು ಕಾಣುತ್ತದೆ. ಮಲ್ಲಿಕಾರ್ಜುನ ಖೂಬಾ ಅವರು ಇದೀಗ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿರುವ ಅವರು, ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಶರಣು ಸಲಗಾರ ನಡುವೆ ನಡೆದ ಗಲಾಟೆ ಮಾಸುವ ಮುಂಚೆನೇ ಇದೀಗ ಬಿಜೆಪಿ ಪಕ್ಷಕ್ಕೆ ಮತ್ತೆ ಆಘಾತ ಎದುರಾಗಿದೆ. ಬಸವಕಲ್ಯಾಣಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದೆ ಇರುವ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ವಿರುದ್ಧ ನಿಂತು ಸೋತಿದ್ದರು ಮಲ್ಲಿಕಾರ್ಜುನ ಖೂಬಾ.

ಈ ಹಿನ್ನೆಲೆಯಲ್ಲಿ ಬಿಜೆಪಿಯ ಕಮಲ ಬೇಡ ಮತ್ತು ಜೆಡಿಎಸ್ ತೆನೆಹೊತ್ತ ಮಹಿಳೆಯೂ ಬೇಡ ಎಂದು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲು ಮಂದಾಗಿದ್ದಾರೆ. ಡಿ ಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖೂಬಾ ಅವರ ಭೇಟಿ ದೃಶ್ಯ ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮುಂದಿನ ಬೆಳವಣಿಗೆ ಕಾದುನೋಡಬೇಕಾಗಿದೆ.

#mallikharjuna khubha #jds #bjp #congress #dkshivakumar #kpcc president #bider