CAVE FOUND IN MANGALORE: ಗುಡ್ಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆಯೊಂದು ಪತ್ತೆ: ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ಪತ್ತೆ

ಮಂಗಳೂರು: ಗುಡ್ಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆಯೊಂದು ಪತ್ತೆಯಾಗಿದ್ದು ಇದರಲ್ಲಿ ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ದೊರೆತಿವೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಗುಹೆ ಪತ್ತೆಯಾಗಿದ್ದು, ಕಲ್ಲೆಂಬಿ ವಿಶ್ವನಾಥ ಗೌಡ ಎಂಬವರ ಜಮೀನಿನಲ್ಲಿ ಈ ಪ್ರಾಚೀನ ಪರಿಕರಗಳು ದೊರತಿವೆ. ರಬ್ಬರ್ ತೋಟ ತೆರವು ಮಾಡಿ ಅಡಿಕೆ ತೋಟ ಮಾಡುವ ಉದ್ದೇಶದಿಂದ ಅಗೆತ ಮಾಡುವಾಗ ಗುಹೆ ಪತ್ತೆಯಾಗಿದೆ.

ಜೆಸಿಬಿ ಯಂತ್ರದ ಮೂಲಕ ಅಡಿಕೆ ಗುಂಡಿ ತೆಗೆಯುವಾಗ ಕಾಣಸಿದ ಪುರಾತನ ಪರಿಕರಗಳು, ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿವೆ. ವಿಶೇಷ ರೀತಿಯ ಗುಹೆಯಲ್ಲಿ ಎರಡು ಅಂತರದ ಕೋಣೆಗಳಿರುವಂತೆ ಗೋಚರಿಸಿವೆ.

More News