CANNABIS PLANT SEIZED: ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಗಾಂಜಾ ಗಿಡಗಳ ವಶ : ಬಂಧನಕ್ಕೊಳಗಾದ ರೈತ

ಬೀದರ್ : ಬೀದರ್ ಜಿಲ್ಲೆ ಗಡಿ ಪ್ರದೇಶದ ಔರಾದ ತಾಲೂಕಿನ ಹಲವು ಗ್ರಾಮ ಗುಡ್ಡಗಾಡು ಪ್ರದೇಶದಲ್ಲಿನ ತನ್ನ ಹೊಲದಲ್ಲಿ ಹತ್ತಿ ಗಿಡಗಳ ಜತೆ ಗಾಂಜಾ ಗಿಡಗಳನ್ನು ಬೆಳೆಸಿದ ರೈತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ 15ಕ್ಕೂ ಹೆಚ್ಚು ಕೆ. ಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ 15 ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಚಿಂತಾಕಿ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಔರಾದ ಚಿಕ್ಲಿ (ಜೆ) ಗ್ರಾಪಂ ವ್ಯಾಪ್ತಿಯ ಕಿಶನ್ ತಾಂಡಾದ ಪುಂಡಲಿಕ್ ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಸ್ವಂತ ಹೊಲದಲ್ಲಿ ಹತ್ತಿ ಬೆಳೆಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಔರಾದ್ ವೃತ್ತ ನೀರಿಕ್ಷಕ ಮಲ್ಲಿಕಾರ್ಜುನ ಇಕ್ಕಳಕಿ ಅವರ ಮಾರ್ಗದರ್ಶನದಲ್ಲಿ ಚಿಂತಾಕಿ ಪೊಲೀಸ್‌ ಠಾಣಾ ಪಿಎಸ್‌ಐ ಸಿದ್ದಲಿಂಗ ಹಾಗೂ ಅವರ ತಂಡ ದಾಳಿ ನಡೆಸಿ ಆರೋಪಿ ಪುಂಡಲಿಕ್ ನನ್ನು ಬಂಧಿಸಿದರು.

ಸುಮಾರು 15 ಕೆ.ಜಿ.ಯ ಗಾಂಜಾ ಗಿಡಗಳನ್ನು ವಶಪಡಿಕೊಂಡು ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸ್ ಇಲಾಖೆ ಭಯ ಇಲ್ಲದೆ ತನ್ನ ಹೊಲದಲ್ಲಿ ಗಾಂಜಾ ಬೆಳಸಲು ಈ ವ್ಯಕ್ತಿ ಹಿಂದೆ ಯಾರು ಇರಬಹುದು ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

More News