JAI SHAH REFUSE TO TAKE TIRANGA: ದೇಶದ ತಿರಂಗಾ ಹಿಡಿಯಲು ನಿರಾಕರಿಸಿದ್ದಕ್ಕೆ ಜಯ್ ಶಾ ವಿರುದ್ಧ ಟೀಕೆ : ಅಸಲಿ ಕಾರಣವಾದರೂ ಏನು ?

ದುಬೈ: ಭಾನುವಾರ ದುಬೈನಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ತಿರಂಗಾ ಬಾವುಟ ಕೈಯಲ್ಲಿ ಹಿಡಿಯಲು ನಿರಾಕರಿಸಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ಅವರು ಯಾವ ಕಾರಣಕ್ಕಾಗಿ ಸಂಭ್ರಮದ ಸಂದರ್ಭದಲ್ಲಿ ತಿರಂಗಾ ಹಿಡಿಯಲು ನಿರಾಕರಿಸಿದ್ದಾರೆ ಎಂಬುದಕ್ಕೆ ಇದುವರೆಗೂ ಅವರು ಸ್ಪಷ್ಟನೆಯನ್ನೂ ನೀಡಿಲ್ಲ. ಆದರೆ, ಅವರು ನಿರಾಕರಿಸಿದ್ದ ವಿಡಿಯೋ ಮಾತ್ರ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

https://twitter.com/seethakkaMLA/status/1563960058006110208?s=20&t=OoNH9x2TsHUFWesrk26ZuQ

ಆದರೆ, ಜಯ್ ಶಾ ಅಭಿಮಾನಿಗಳು ಮಾತ್ರ ಎಸಿಸಿ ಅಧ್ಯಕ್ಷರಾಗಿರುವವರು ಅಂತರರಾಷ್ಟ್ರೀಯ ಪಂದ್ಯದಲ್ಲಿ ಯಾವುದೇ ತಂಡವನ್ನು ಬಹಿರಂಗವಾಗಿ ಬೆಂಬಲಿಸುವಂತಿಲ್ಲ, ಈ ನಿಯಮವನ್ನು ಅರಿತ ಅವರು ಸ್ಟೇಡಿಯಂನಲ್ಲಿ ಬಾವುಟ ಹಿಡಿಯಲು ನಿರಾಕರಿಸಿದ್ದಾರೆ ಎಂಬ ಸಮಜಾಯಿಸಿ ನೀಡಿದ್ದಾರೆ. ಆದ್ದರಿಂದ ಜಯ್ ಶಾ ಅವರ ತೇಜೋವಧೆ ಮಾಡುವುದು ಸರಿಯಲ್ಲ ಎನ್ನುವುದು ಅನೇಕರ ವಾದವಾಗಿದೆ.

ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿದಿದೆ. ಈ ವೇಳೆ ವಿಐಪಿ ಲಾಂಜ್ ನಲ್ಲಿದ್ದ ಜಯ್ ಶಾ ಹಾಗೂ ಇತರರೂ ಕೂಡ ಭಾರತ ತಂಡವನ್ನು ಬೆಂಬಲಿಸಿ ಸಂಭ್ರಮಾಚರಣೆ ಮಾಡಿದರು. ಶಾ ಅವರ ಆಪ್ತರೊಬ್ಬರು ಭಾರತದ ಬಾವುಟವನ್ನು ಶಾ ಕೈಗೆ ನೀಡಲು ಮುಂದಾಗಿದ್ದರು. ಆದರೆ ಅದನ್ನು ಶಾ ನಿರಾಕರಿಸಿದ್ದರು.

#union minister #amit shah #jai shah #bcci secretary #acc president #t-20 cricket match #india v/s pakisthan #india won

More News