RAVINDRA JADEJA OUT FROM WORLD CUP?: ಮುಂಬರುವ T-20 ವಿಶ್ವಕಪ್ ಟೂರ್ನಿಯಿಂದ ಆಲ್ ರೌಂಡರ್ ರವೀಂದ್ರ ಜಡೇಜ ಔಟ್ ?

ನವದೆಹಲಿ : ಏಷ್ಯಾ ಕಪ್ ಟಿ-20ಯಲ್ಲಿ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಮೊಣಕಾಲಿನ ಗಾಯದ ನೋವು ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಅವಶ್ಯಕತೆ ಇರುವುದರಿಂದ ಅವರು ಮುಂಬರುವ ಟಿ-20 ವಿಶ್ವಕಪ್ ನಿಂದ ಬಹುತೇಕ ಹೊರಬಿದ್ದಿದ್ದಾರೆ.
ಇದರಿಂದ 33 ವರ್ಷದ ಅನುಭವಿ ಆಟಗಾರ ಜಡೇಜ ಅನುಪಸ್ಥಿತಿ ಟೀಮ್ ಇಂಟಿಯಾ ತಂಡಕ್ಕೆ ಕಾಣಲಿದ್ದು, ರೋಹಿತ್ ಶರ್ಮಾ ಬಳಗಕ್ಕೆ ದೊಡ್ಡ ಹಿನ್ನೆಡೆ ಎಂದೇ ಹೇಳಲಾಗುತ್ತಿದೆ. ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಇಂತಿಷ್ಟೇ ದಿನದಲ್ಲಿ ಗುಣವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.
ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ-20 ಟೂರ್ನಿಯಲ್ಲಿ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ್ದರು. ಹಾಂಗ್ ಕಾಂಗ್ ಪಂದ್ಯದ ನಂತರ ಅವರು ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಶುಕ್ರವಾರ ಬಿಸಿಸಿಐ ಹೇಳಿತ್ತು.

ಬ್ಯಾಟ್ ಮತ್ತು ಬೌಲ್ ಮೂಲಕ ತಂಡದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡುತ್ತಿರುವ ಜಡೇಜ, ಮಹತ್ವದ ಟೂರ್ನಿಯಲ್ಲಿ ಆಡದೇ ಇರುವುದು ಭಾರತ ತಂಡಕ್ಕೆ ಬಹುದೊಡ್ಡ ಹೊಡೆತ ಎಂದೇ ಬಿಂಬಿಸಲಾಗಿದೆ.

#ravindra jadeja #bcci #asia cup #t-20 world cup #knee surgery #rohith sharma

More News