ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದಡಿ ಪೋಕ್ಸೋ ಕಾಯಿದೆಯಡಿ ಬಂಧನಕ್ಕೊಳಗಾಗಿರುವ ಮುರುಘಾ ಶರಣರನ್ನು ಇಂದು ಚಿತ್ರದುರ್ಗ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಸ್ಥಳ ಮಹಜರ್ ಗೆ ಕರೆದೊಯ್ದರು.
DYSP ಕಚೇರಿಯಿಂದ ಮುರುಘಾ ಮಠಕ್ಕೆ ಕರೆದೊಯ್ಯದ್ದ ಪೊಲೀಸರು ಕೃತ್ಯ ನಡೆದ ಮುರುಘಾ ಮಠಕ್ಕೆ ಶಿವಮೂರ್ತಿ ಶರಣರನ್ನು ಕರೆದೊಯ್ದರು. ಈ ಸಂದರ್ಭದಲ್ಲಿ ಮುರುಘಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.

ಈಗಾಗಲೇ DYSP ಕಚೇರಿಗೆ ಆಗಮಿಸಿರುವ ತನಿಖಾಧಿಕಾರಿ ಅನಿಲ್ ಕುಮಾರ್, ಆರೋಪಿ ಮುರುಘಾ ಶರಣರನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಮಠಕ್ಕೆ ಕರೆದೊಯ್ದು ಸ್ಥಳ ಮಹಜರ್ ನಡೆಸಿದರು.

ಇದೇ ಸಂದರ್ಭದಲ್ಲಿ DYSP ಕಚೇರಿಗೆ SP. ಕೆ. ಪರಶುರಾಮ್ ಕೂಡಾ ಆಗಮಿಸಿದ್ದು, ವಿಚಾರಣೆಯಿಂದ ಪೊಲೀಸರು ಪಡೆದ ಮಾಹಿತಿಯನ್ನು ಪಡೆದುಕೊಂಡರು.
