ಉಡುಪಿ : ಮದ್ಯ ಸೇವಿಸಿ ಮನಸೋ ಇಚ್ಛೆ ಕಾರು ಚಲಾಯಿಸಿ ಯುವಕನೊಬ್ಬ ಕೆಲಕಾಲ ರದ್ದಾಂತ ಸೃಷ್ಟಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲ ಸರ್ಕಲ್ ಬಳಿ ತಡರಾತ್ರಿ ಘಟನೆ ನಡೆದಿದ್ದು, ಪಬ್ ವೊಂದರಲ್ಲಿ ಕುಡಿದು ಹೊರಬಂದ 5 ಮಂದಿಯ ತಂಡ ಬೇರೆ ಕಾರುಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಚಾಲಕನ ಬ್ಯಾಲೆನ್ಸ್ ತಪ್ಪಿ ರದ್ದಾಂತ ಸೃಷ್ಟಿ ಮಾಡಿದ್ದಾನೆ.
ಘಟನೆಯನ್ನು ಕಣ್ಣಾರೆ ನೋಡಿದ ಜನರು ಗಾಬರಿಗೊಂಡು ಬೊಬ್ಬೆ ಹೊಡೆದರೂ, ಮದ್ಯದ ನಶೆಯಲ್ಲಿಯೇ ಕಾರು ಚಲಾಯಿಸಿದ ಯುವಕ. ಪರಾರಿ ಆಗುವ ವೇಳೆ ಎರಡು ಕಾರುಗಳು ಜಖಂಗೊಂಡಿವೆ.

ಶಿವಮೊಗ್ಗದ ಸುಹಾಸ್ ಕಾರು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದ್ದು, ಸುಹಾಸ್ ಜೊತೆ ಮತ್ತೂ ನಾಲ್ಕು ಮಂದಿ ಕಾರಿನಲ್ಲಿದ್ದರು. ಪೆರಂಪಳ್ಳಿ ರಸ್ತೆಯಲ್ಲಿ ಕಾರು ನಿಲ್ಲಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ ಮದ್ಯಪಾನ ಮಾಡಿರುವುದು ಪತ್ತೆಯಾಗಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.