VIRAT KOHLI: ಸಂಕಷ್ಟದ ಸಮಯದಲ್ಲಿ ಟೆಸ್ಟ್ ನಾಯಕ ಸ್ಥಾನ ತೊರೆದಾಗ ಎಂಎಸ್ ಡಿ ಮಾತ್ರ ಸಂದೇಶ ಕಳುಹಿಸಿದ್ದರು: ಕೊಯ್ಲಿ

ದುಬೈ : ವೈಯಕ್ತಿಕವಾಗಿ ಕೆಟ್ಟ ಫಾರ್ಮ್ ನಲ್ಲಿದ್ದಾಗ ನಾನು ಭಾರತ ಟೆಸ್ಟ್ ತಂಡದ ನಾಯಕ ಸ್ಥಾನವನ್ನು ತೊರೆದಿದ್ದೆ. ಅಂದು ನನಗೆ ಮಾಜಿ ಕಪ್ತಾನರಾದ ಮಹೇಂದ್ರ ಸಿಂಗ್ ಧೋನಿ ಮಾತ್ರ ನನಗೆ ಸಂದೇಶ ಕಳುಹಿಸಿದ್ದರು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಯ್ಲಿ ಹೇಳಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ನಲ್ಲಿ ವೈಯಕ್ತಿಕ ಫಾರ್ಮ್ ನಲ್ಲಿ ಲಯ ಕಂಡುಕೊಂಡಿರುವ ವಿರಾಟ್ ಕೊಯ್ಲಿ ಟ್ವೆಂಟಿ -20 ಪಂದ್ಯದಲ್ಲಿ ಅತ್ಯುತ್ತಮವಾಗಿಯೇ ಬ್ಯಾಟ್ ಬೀಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಹಾಗೂ ಹಿಂದಿನ ಪಂದ್ಯದಲ್ಲಿ ಸತತವಾಗಿ ಎರಡು ಅರ್ಧ ಶತಕ ಗಳಿಸಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನದ ಕಠಿಣ ಪರಿಸ್ಥಿತಿಯಲ್ಲಿ ನಿಜವಾಗಿ ಬೆಂಬಲ ನೀಡಿದವರ ಬಗ್ಗೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅನೇಕರ ಬಳಿ ನನ್ನ ಮೊಬೈಲ್ ಸಂಖ್ಯೆಇದೆ. ಟಿವಿಯಲ್ಲಿ ಕುಳಿತು ಅನೇಕರು ಸಲಹೆ ನೀಡುತ್ತಾರೆ, ಆದರೆ, ನನ್ನ ಕಠಿಣ ಸಂದರ್ಭದಲ್ಲಿ ಯಾರೊಬ್ಬರೂ ಸಂದೇಶ ಕಳುಹಿಸಿರಲಿಲ್ಲ, ಮಾತನಾಡಿರಲಿಲ್ಲ.

ಒಬ್ಬನೇ ಒಬ್ಬ ವ್ಯಕ್ತಿ ಸಂದೇಶ ರವಾನಿಸಿದ್ದರು. ಅವರು ಮಹೇಂದ್ರ ಸಿಂಗ್ ಧೋನಿ. ನೀವು ಯಾರೊಂದಿಗೆ ನಿಜವಾಜ ಗೌರವ ಹೊಂದಿದ್ದರೆ ಅವರು ಈ ರೀತಿಯಾಗಿ ಕಾಣಸಿಗುತ್ತಾರೆ ಎಂದು ಹೇಳಿದ್ದಾರೆ. ನಾನು ಅವರಿಂದ ಏನೂ ಬಯಸಿಲ್ಲ, ಅವರೂ ಕೂಡ ನನ್ನಿಂದ ಏನೂ ಬಯಸಿಲ್ಲ. ವಿಚಾರಗಳಿದ್ದರೆ ಅವರನ್ನು ವೈಯಕ್ತಿಕವಾಗಿ ಸಂದರ್ಶಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಪ್ರಾಮಾಣಿಕವಾಗಿ ಬದುಕಲು ಬಯಸುತ್ತೇನೆ ಅಂತಿಮವಾಗಿ ದೇವರು ಎಲ್ಲವನ್ನೂ ದಯಪಾಲಿಸುತ್ತಾರೆ ಎಂದು ತಮ್ಮಲ್ಲಿನ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

#bcci #virat kohli #mahendra singh dhoni #former captain #team india #asia cup

More News

You cannot copy content of this page