ದುಬೈ : ಏಷ್ಯಾ ಕಪ್ ಟಿ-20 ಸೂಪರ್ -4 ಹಂತದ ನಿನ್ನೆಯ ಪಂದ್ಯದಲ್ಲಿ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ರೋಚಕ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದು, ಪಾಕಿಸ್ತಾನ 5 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿತ್ತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಸ್ಪೋಟಕ ಬ್ಯಾಂಟಿಂಗ್ ನಡೆಸಿತು. ಆರಂಭಿಕ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಸ್ಫೋಟಕ ಆರಂಭ ನೀಡಿದ್ದು, 5 ಓವರ್ ಗಳಿಗೆ 54ರನ್ ಗಳ ಕಾಣಿಕೆ ನೀಡಿತ್ತು. ಆದರೆ, ಮಧ್ಯಮ ಕ್ರಮಾಂಕದ ಆಟಗಾರರ ದಿಢೀರ್ ಕುಸಿತದಿಂದ ಬೃಹತ್ ಮೊತ್ತದ ಗುರಿ ಇಟ್ಟಿದ್ದ ಭಾರತ 181 ರನ್ ಬಾರಿಸಲಷ್ಟೇ ಸಾಧ್ಯವಾಯಿತು.
ಹಾರ್ದಿಕ್ ಪಾಂಡ್ಯ ಮತ್ತು ರಷಬ್ ಪಂತ್ ಅತ್ಯಂತ ಸುಲಭ ಕ್ಯಾಚ್ ನೀಡಿ ಔಟ್ ಆಗಿರುವುದು ಅನೇಕರ ಕಣ್ಣು ಕೆಂಪಾಗಿಸಿತ್ತು. ಆದರೆ, ವಿರಾಟ್ ಕೊಯ್ಲಿ ಭರ್ಜರಿ ಆಟವಾಡಿದರು, ಆದರೆ ಅವರಿಗೆ ಇನ್ನೊಂದು ಕಡೆ ಸಾಥ್ ಸಿಕ್ಕಿರಲಿಲ್ಲ. ಪಾಂಡ್ಯ ಶೂನ್ಯಕ್ಕೆ ಔಟಾದರೆ, ಪಂತ್ 14 ರನ್ ಗೆ ಪೆವಿಲಿಯನ್ ಕಡೆ ಮುಖ ಮಾಡಿದರು.
ನಿನ್ನೆಯ ಪಂದ್ಯದಲ್ಲಿ ದಿನೇಶ್ ಕಾರ್ತೀಕ್ ಬದಲಿಗೆ ರಿಷಬ್ ಪಂತ್ ಗೆ ಅವಕಾಶ ಕಲ್ಪಿಸಲಾಗಿತ್ತು. ತಂಡದಲ್ಲಿ ಏಕೈಕ ಎಡಗೈ ದಾಂಡಿಗನಾಗಿ ಸ್ಥಾನ ಪಡೆದರು. ಆದರೆ, ಅವರು ಸುಲಭ ಕ್ಯಾಚಿಗೆ ಔಟಾಗಿ ಪೆವಿಲಿಯನ್ ಗೆ ತೆರಳುತ್ತಿದ್ದಾಗ ಕಪ್ತಾನ ರೋಹಿತ್ ಶರ್ಮಾ ಕೋಪಗೊಂಡಿದ್ದರು.

ಡ್ರೆಸ್ಸಿಂಗ್ ರೂಮ್ ನಲ್ಲಿ ರಿಷಬ್ ಪಂತ್ ಗೆ ರೋಹಿತ್ ಶರ್ಮಾ ಫುಲ್ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಶಾಟ್ ಆಯ್ಕೆ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ರೋಹಿತ್ ಶರ್ಮಾ ಪಂತ್ ಅವರನ್ನು ತರಾಟೆಗೆ ತೆಗೆದುಕೊಂಡರು.
#RISHABHPANTH17 #RISHABHPANT #ROHITSHARMA #BCCI #INDv/sPAK #PAKISTHAN #ANGRY #SHOT SELECTION #T-20 #ASIA CUP