VIRAL VIDEO: ಚಿಕಿತ್ಸೆಗೆ ಬಂದಾಗಲೇ ರೋಗಿಗೆ ಹೃದಯಾಘಾತ: ಪ್ರಾಣ ಉಳಿಸಿದ ವೈದ್ಯ ಅರ್ಜುನ್ ಅಡ್ನಾಯಕ್ :ವಿಡಿಯೋ ವೈರಲ್

ಕೊಲ್ಹಾಪುರ: ವೈದ್ಯ ನಾರಾಯಣೋ ಹರಿ ಅಂತಾರೆ, ಅದೇ ರೀತಿ ಇಲ್ಲೊಬ್ಬ ವೈದ್ಯರು ಹೃದಾಯಾಘಾತಕ್ಕೆ ಒಳಗಾಗಿದ್ದ ರೋಗಿಯ ಪ್ರಾಣವನ್ನು ಉಳಿಸೋ ಮೂಲಕ ಜೀವದಾನ ಮಾಡಿದ್ದಾರೆ.
ಅಂದ ಹಾಗೆ ಈ ಘಟನೆ ನಡೆದಿರೋದು ಕೊಲ್ಲಾಪುರದಲ್ಲಿ.ಚಿಕಿತ್ಸೆ ಪಡೆಯಲು ಅಂತಾ ಹೃದ್ರೋಗಿ ಓರ್ವರು ಆಸ್ಪತ್ರೆಗೆ ಆಗಮಿಸಿದ್ದಾರೆ. ವೈದ್ಯರ ಬಳಿ ಮಾತನಾಡುವ ವೇಳೆಯೇ ಹಾರ್ಟ್ ಅಟ್ಯಾಕ್ ಆಗಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ವೈದ್ಯ ಅರ್ಜುನ್ ಅಡ್ನಾಯಕ್, ರೋಗಿಯ ಪ್ರಾಣ ಉಳಿಸಿದ್ದಾರೆ.

ಸಂಪೂರ್ಣ ಘಟನೆಯ ದೃಶ್ಯ ಆಸ್ಪತ್ರೆಯಲ್ಲಿ ಹಾಕಿದ್ದ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ವಕ್ತಾರ ಧನಂಜಯ್ ಮಹಾದಿಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು ವೈದ್ಯನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೊಲ್ಲಾಪುರದ ಪ್ರಸಿದ್ಧ ಹೃದ್ರೋಗ ತಜ್ಞರಲ್ಲಿ ಡಾ. ಅರ್ಜುನ್ ಅಡ್ನಾಯಕ್ ಕೂಡ ಒಬ್ಬರಾಗಿದ್ದಾರೆ.

#DOCTOR ARJUN ADNAIK #SAVED LIFE #HEART ATTACK #DHANAJAY MAHADIK #MP #RAJYA SABHA MEMBER

More News