ಉಜ್ಜೈನಿ: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅಭಿನಯನದ ಬಹುನಿರೀಕ್ಷಿತ ಬ್ರಹ್ಮಾಸ್ತ್ರ ಚಾಪ್ಟರ್-1 ಬಿಡುಗಡೆಗೆ ಸಿದ್ದವಾಗಿದೆ.
ಶುಕ್ರವಾರ ಬ್ರಹ್ಮಸ್ತ್ರ ಚಿತ್ರ ದೇಶದಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಣಬೀರ್ ಮತ್ತು ಆಲಿಯಾ ಉಜ್ಜೈನಿಯಲ್ಲಿರುವ ಮಹಾಕಾಲ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದರು.
ಆದರೆ, ರಣಬೀರ್ ಹಿಂದೂ ವಿರೋಧಿ ಎಂದು ಆರೋಪಿಸಿರುವ ಉಜ್ಜೈನಿಯಲ್ಲಿನ ಭಜರಂಗ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅವ ರ ದೇಗುಲ ಪ್ರವೇಶವನ್ನು ನಿರಾಕರಿಸಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಮತ್ತು ಭದ್ರತೆಯ ದೃಷ್ಟಿಯಿಂದ ರಣಬೀರ್ ಮತ್ತು ಆಲಿಯಾ ದೇಗುಲ ಭೇಟಿಯನ್ನು ರದ್ದುಗೊಳಿಸಿ ಮುಂಬೈಗೆ ಹಿಂದಿರುಗಿದ್ದಾರೆ.

ರಣಬೀರ್ ಕಾರ್ಯಕ್ರದ ಸಂದರ್ಶನವೊಂದರಲ್ಲಿ ಗೋಮಾಂಸ ತಿನ್ನುವುದು ಎಂದರೆ ನನಗೆ ಬಲು ಇಷ್ಟ ಎಂದು ಹೇಳಿದ್ದರು. ಹಾಗೆಯೇ ಶಿವನ ಮಹಿಮೆಯನ್ನು ಸಾರುವ ಬ್ರಹ್ಮಾಸ್ತ್ರ ಚಿತ್ರದಲ್ಲಿ ಶೂ ಧರಿಸಿ ದೇಗುಲದ ಗಂಟೆ ಬಾರಿಸುತ್ತಿದ್ದಾರೆ, ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಅವರ ವಿರುದ್ಧ ಪ್ರತಿಭಟನೆ ನಡೆಸಿ, ದೇಗುಲ ಪ್ರವೇಶವನ್ನು ನಿರಾಕರಿಸಿದ್ದರು.

ಈ ಹಿಂದೆ ಅವರು ನಟಿಸಿರುವ ಯಾವುದಾದರು ಒಂದು ಚಿತ್ರ ಬಿಡುಗಡೆಯಾಗಲಿದೆ ಎನ್ನುವ ಸಂದರ್ಭದಲ್ಲಿ ಅವರು ಮಹಾಕಾಲ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಮಹಾಕಾಲ ದೇಗುಲದಲ್ಲಿ ಪ್ರತಿದಿನ ಸಂಜೆ ಸಂಧ್ಯಾ ಪೂಜೆ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಅವರು ಪೂಜೆ ಸಲ್ಲಿಸುತ್ತಿದ್ದುದು ವಾಡಿಕೆಯಾಗಿತ್ತು.
#ranbhir kapoor #aliya bhat #brahmastra part 1 #mahakala temple