MYSORE DASARA : ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಮೈಸೂರು ದಸರಾ ಉದ್ಘಾಟನೆ

ಬೆಂಗಳೂರು: ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಲಿರುವ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮ್ಮತಿಸಿದ್ದಾರೆ.
ರಾಷ್ಟ್ರಪತಿಯವರನ್ನು ಆಹ್ವಾನಿಸಿ ಸೆಪ್ಟೆಂಬರ್ 6 ರಂದು ಮುಖ್ಯಮಂತ್ರಿಯವರು ಪತ್ರ ಬರೆದಿದ್ದರು. ಇದಕ್ಕೆ ರಾಷ್ಟ್ರಪತಿಯವರು ಸಮ್ಮತಿ ಸೂಚಿಸಿರುವುದಾಗಿ ರಾಷ್ಟ್ರಪತಿ ಭವನದ ಅಧಿಕಾರಿಗಳು ಮುಖ್ಯಮಂತ್ರಿ ಕಚೇರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ಆದ್ದರಿಂದ ಈ ಬಾರಿಯ ಅದ್ದೂರಿ ಹಾಗೂ ಐತಿಹಾಸಿಕ ದಸರಾವನ್ನು ರಾಷ್ಟ್ರಪತಿಯವರು ಉದ್ಘಾಟಿಸುವುದರ ಮೂಲಕ ರಾಜ್ಯಕ್ಕೆ ಅವರು ತಮ್ಮ ಅಧಿಕೃತ ಭೇಟಿ ಆರಂಭಿಸಲಿದ್ದಾರೆ.

#president droupadi murmu #dasara #september 6 #innoguration #mysore dasara festival #chamundi hills

More News