ENCROACHMENT BY IT COMPANIES: ಮಳೆಯಿಂದ ಪಾಠ ಕಲಿತ್ತಿದ್ದೇವೆ: ಐಟಿ ಕಂಪನಿಗಳಿಂದಲೂ ಒತ್ತುವರಿ: ತೆರವಿಗೆ ಸೂಚನೆ ನೀಡಲಾಗಿದೆ: ಅಶೋಕ್

ಬೆಂಗಳೂರು : ಬೆಂಗಳೂರು ನಗರದಲ್ಲಿ 30ಕ್ಕೂ ಹೆಚ್ಚು ಐಟಿ ಕಂಪನಿಗಳು ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿವೆ. ಈ ಎಲ್ಲ ಕಂಪನಿಗಳನ್ನು ಡೆಮಾಲಿಷ್ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿರುವ ಕೆಲವು ಐಟಿ ಬಿಟಿ ಕಂಪನಿಗಳ ಮಾಲೀಕರು ತುಂಬಾ ಸಾಚಾ ರೀತಿಯಲ್ಲಿ ಮಾತನಾಡುತ್ತಿದ್ದವು, ಅವುಗಳ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು.
ಪ್ರತಿ ಮಳೆ ಬಂದಾಗಲೂ ಹಿಂದಿನ ಸರ್ಕಾರಗಳು ಡೆಮಾಲಿಷನ್ ಅನ್ನೋ ನಾಟಕ ಮಾಡುತ್ತಿದ್ದರು. ಮಳೆ ನಿಂತ ಬಳಿಕ ಡೆಮಾಲಿಷನ್ ಕೂಡ ನಿಲ್ಲಿಸುತ್ತಿದ್ದರು. ಆದರೆ, ನಮ್ಮ ಸರ್ಕಾರ ಒತ್ತುವರಿ ಜಾಗದೆಲ್ಲೆಡೆ ನಿರಂತರ ಡೆಮಾಲಿಷನ್ ಕಾರ್ಯ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಒತ್ತುವರಿ ಜಾಗದ ಪಟ್ಟಿಯನ್ನು ಕಂದಾಯ ಇಲಾಖೆ ರೆಡಿ ಮಾಡಿದೆ, ಈ ಪಟ್ಟಿಯನ್ನು ನಾವು ಬಿಬಿಎಂಪಿಗೆ ಕೊಟ್ಟಿದ್ದೇವೆ, ದೊಡ್ಡವರು, ಸಣ್ಣವರು ಯಾರು ನೋಡದೇ ಡೆಮಾಲಿಷನ್ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಕೆಲವು ಬಿಲ್ಡರ್ ಗಳ ಮನೆ ಕೂಡ ರಾಜಕಾಲುವೆ ಮೇಲೆ ಇದೆ, ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ಸೇರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಒತ್ತುವರಿ ವಿಚಾರವನ್ನು ನ್ಯಾಯಾಲಯಕ್ಕೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ ಅಶೋಕ್, ಸರ್ಕಾರದ ಪರ ಕೇವಿಯಟ್ ಹಾಕುವ ಕುರಿತು ಚಿಂತಿಸಲಾಗುತ್ತಿದೆ ಎಂದರು. ಈ ನೆರೆ ನಮಗೆ ಪಾಠ ಕಲಿಸಿದೆ, ಯಾವುದಕ್ಕೂ ಬಗ್ಗದೆ ಒತ್ತುವರಿ ತೆರವು ಮಾಡಲಾಗುವುದು ಎಂದು ತಿಳಿಸಿದರು.
ಭಾಗಮನೆ ಪಾರ್ಕ್ ಗೂ ಸೇರಿದಂತೆ ಯಾವುದೇ ಬಲಿಷ್ಟರಿಗೂ ಈ ವಿಚಾರದಲ್ಲಿ ವಿನಾಯಿತಿ ನೀಡುವುದಿಲ್ಲ ಎಂದು ಹೇಳಿದ ಅವರು, ಸಿಎಂ ಮತ್ತು ಅಡ್ವಕೇಟ್ ಜನರಲ್ ಜತೆ ಚರ್ಚಿಸಲಾಗುವುದು ಎಂದರು.

#it companies #r ashok #minister #encroachement #cm bommai

More News