ನೋಯ್ಡಾ: ವ್ಯಕ್ತಿಯೋರ್ವ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಮರ್ಸಿಡಿಸ್ ಬೆನ್ಜ್ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ನೋಯ್ಡಾದಲ್ಲಿ.
ಬೈಕ್ ನಲ್ಲಿ ಪೆಟ್ರೋಲ್ ಬಾಟಲ್ ತಂದ ವ್ಯಕ್ತಿ ಕಾರಿನ ಮೇಲೆ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಷ್ಟಕ್ಕೂ ಆತ ಕಾರಿಗೆ ಬೆಂಕಿ ಹಚ್ಚಲು ಕಾರಣ ಕೂಡ ಇದೆ ಅಂತೆ. ವಾಸ್ತವವಾಗಿ ಮರ್ಸಿಡಿಸ್ ಕಾರಿನ ಮಾಲೀಕರ ಮನೆಗೆ ಈ ವ್ಯಕ್ತಿ ಟೈಲ್ಸ್ ಅಳವಡಿಸಿದ್ದನಂತೆ. ಹಣ ಕೇಳಿದ್ರೆ ಪೂರ್ತಿ ಹಣ ನೀಡಿರಲಿಲ್ಲಾ ಅಂತೆ. ಅದರಿಂದ ಕೋಪ ಕೊಂಡು ಸೇಡು ತೀರಿಸಿಕೊಳ್ಳಲು ಕಾರಿಗೆ ಬೆಂಕಿ ಹಚ್ಚಿದ್ದಾನಂತೆ.
#mercedes benz #set fire #noida #revenge




