HINDI DIWAS: ರಾಜ್ಯ ಸರ್ಕಾರ ಹಿಂದಿ ದಿವಸ್ ಆಚರಣೆಗೆ ತೀವ್ರ ವಿರೋಧ: ಕೇಶವಕೃಪಾ ಹಾಗೂ ಪ್ರಧಾನಿಯವರನ್ನು ಮೆಚ್ಚಿಸುವ ಕೆಲಸ ಬೇಡ : ಸಿಎಂ ಇಬ್ರಾಹಿಂ ಟೀಕೆ

ಬೆಂಗಳೂರು : ನಮ್ಮ ತಾಯಿ, ನಾಡಿನ ಭಾಷೆ ನಮ್ಮದು. ದೆಹಲಿ, ಭಾಷೆ, ಹೈಕಮಾಂಡ್ ಗುಲಾಮಗಿರಿ ಯಾವುದು ಇಲ್ಲಿ ನಡೆಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹಿಂದಿ ಭಾಷೆ ಆಚರಣೆ ಮಾಡಲು ತೆರಳುತ್ತಿರುವ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಬಸವರಾಜ್ ಬೊಮ್ಮಾಯಿಯವರು ನಮ್ಮ ದುಡ್ಡಿನಲ್ಲಿ ಹಿಂದಿ ಆಚರಣೆ ಮಾಡುತ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮದೇನಿದ್ರು ಬಸವಕೃಪಾ, ಕೇಶವಕೃಪ ಮತ್ತು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಮೆಚ್ಚಿಸುವ ಕೆಲಸ ಮಾಡಲು ಮುಖ್ಯಮಂತ್ರಿ ಹೊರಟಿದ್ದಾರೆ. ನಿಮಗೆ ತೆವಲಿದ್ದರೆ ದೆಹಲಿಯಿಂದ ಹಣ ತಂದು ಆಚರಣೆ ಮಾಡಿ ಎಂದು ಸವಾಲು ಹಾಕಿದ ಅವರು, ಅತಿವೃಷ್ಟಿಯಾದಾಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲಸ, ಇದೀಗ ನಮ್ಮ ದುಡ್ಡಿನಲ್ಲಿ ಹಿಂದಿ ದಿವಸ ಮಾಡೋಕೆ ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ನಾವು ಹಿಂದಿ ಕಲಿತುಕೊಂಡು ಉತ್ತರಭಾರತಕ್ಕೆ ಹೋಗಿ ಪಾನಿಪೂರಿ ಮಾರೋ ಅಗತ್ಯವಿಲ್ಲ ಉತ್ತರ ಭಾರತದಿಂದ ಗುಜರಾಜ್‌ನಿಂದ ಬಂದು ಇಲ್ಲಿ ಪಾನಿ ಪೂರಿ ಮಾರುತ್ತಾ ಇರೋದು ಸಾಕು ಎಂದು ವ್ಯಂಗ್ಯವಾಡಿದರು.
ಸಿಟಿ ರವಿ ವಿರುದ್ಧ ಆಕ್ರೋಶ
ಹಿಂದಿ ಭಾಷೆ ದಿವಸ್ ಆಚರಣೆ ಮಾಡೋದು ಸಾಂಸ್ಕೃತಿಕ ವಿನಿಮಯ ಎಂದು ಹೇಳುತ್ತಿರುವ ಶಾಸಕ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಿಮ್ಮ ಅವ್ವನ ಭಾಷೆಗೆ ನಿಮ್ಮ ದುಡ್ ಖರ್ಚು ಮಾಡ್ರಪ್ಪ, ನಮ್ಮ ದುಡ್ಡು ಯಾಕೆ‌ ನೀವು ಹಿಂದಿಗೆ ಖರ್ಚು ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.

#CMIBRAHIM #CMBASAVARAJBOMMAI #HINDI DIWAS #JDS PRESIDENT #KESHAVAKRUPA #CTRAVI #PRIME MINISTER #NARENDRA MODI #FLOOD

More News